alex Certify ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್: ಹಕ್ಕಿನ ವಿಸ್ತೀರ್ಣದ ಭೂಮಿಗೆ ತಕ್ಕಂತೆ ಶುಲ್ಕ ಪಡೆಯಲು ಭೂಮಾಪನ ಇಲಾಖೆಗೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್: ಹಕ್ಕಿನ ವಿಸ್ತೀರ್ಣದ ಭೂಮಿಗೆ ತಕ್ಕಂತೆ ಶುಲ್ಕ ಪಡೆಯಲು ಭೂಮಾಪನ ಇಲಾಖೆಗೆ ಆದೇಶ

ಬೆಂಗಳೂರು: ಮೋಜಣಿ ವ್ಯವಸ್ಥೆ ಅಡಿ ಭೂಮಿಯ ಸರ್ವೆಗೆ ಅರ್ಜಿ ಸಲ್ಲಿಸುವವರಿಂದ ಶುಲ್ಕ ಪಡೆಯುವ ವಿಚಾರದಲ್ಲಿನ ಗೊಂದಲವನ್ನು ಕಂದಾಯ ಇಲಾಖೆ ನಿವಾರಿಸಿದೆ.

ಪಹಣಿಯಲ್ಲಿ ಕಾಲ 3 ಬದಲಿಗೆ ಕಾಲಂ 9ರಲ್ಲಿ ಹಕ್ಕಿನ ವಿಸ್ತೀರ್ಣದ ಭೂಮಿಗೆ ತಕ್ಕಂತೆ ಶುಲ್ಕ ಪಡೆಯುವಂತೆ ಭೂಮಾಪನ ಇಲಾಖೆಗೆ ಆದೇಶ ನೀಡಿದೆ. ಭೂಮಾಲೀಕರು ತತ್ಕಾಲ್ ಪೋಡಿ, ಹದ್ದುಬಸ್ತಿಗಾಗಿ ಅರ್ಜಿ ಸಲ್ಲಿಸಿ ಸರ್ವೇ ನಡೆಸುವ ಸಂದರ್ಭದಲ್ಲಿ ಪಹಣಿಯ ಕಾಲ 3ರಲ್ಲಿ ಕರಾಬು ಭೂಮಿ, ಸಾಗುವಳಿ ಭೂಮಿ ಸೇರಿದಂತೆ ಇನ್ನಿತರ ಭೂಮಿಯ ವಿಸ್ತೀರ್ಣವನ್ನಾಧರಿಸಿ ಶುಲ್ಕ ಪಡೆಯಲಾಗುತ್ತದೆ. ಇದರಿಂದ ಗೊಂದಲ ಉಂಟಾಗುತ್ತದೆ ಎನ್ನುವ ದೂರು ಬಂದಿದ್ದು, ಇದನ್ನು ನಿವಾರಿಸಲು ಚಳಿಗಾಲದ ಅಧಿವೇಶನದಲ್ಲಿ ಅನೇಕ ಶಾಸಕರು ಕಂದಾಯ ಇಲಾಖೆಗೆ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪಹಣಿಯ ಕಾಲ 9ರಲ್ಲಿನ ಅರ್ಜಿದಾರರ ಹಕ್ಕಿನ ವಿಸ್ತೀರ್ಣದ ಭೂಮಿಗೆ ಮಾತ್ರ ಶುಲ್ಕ ಪಡೆಯುವಂತೆ ಆದೇಶ ನೀಡಿದೆ. ಸ್ವಾವಲಂಬಿ ಯೋಜನೆ ಅಡಿ ಸ್ವ ಇಚ್ಛೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ ಹೆಚ್ಚುವರಿ ಆಗಿ ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಜನವರಿ 1ರಿಂದ ಈ ಆದೇಶಗಳು ಜಾರಿಗೆ ಬಂದಿರುತ್ತದೆ. ಜನವರಿ 1ಕ್ಕೆ ಮೊದಲು ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.

111 ಇ ಅಲಿನೇಷನ್ ಪೂರ್ವ ನಕ್ಷೆ ತತ್ಕಾಲ್ ಪೋಡಿಗೆ ನಗರ ಪ್ರದೇಶದ ಜಮೀನಿಗೆ 3 ಎಕರೆವರೆಗೆ 2500 ರೂ., ನಂತರದ ಹೆಚ್ಚಿನ ಭೂಮಿಗೆ ಪ್ರತಿ ಎಕರೆಗೆ 1 ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳಿಗೆ ಎರಡು ಎಕರೆವರೆಗೆ 1500 ರೂ., ನಂತರದ ಹೆಚ್ಚಿನ ಭೂಮಿಗೆ ಪ್ರತಿ ಎಕರೆಗೆ 400 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

ಹದ್ದು ಬಸ್ತು ಮಾಡಿಸಲು ನಗರ ಪ್ರದೇಶದಲ್ಲಿನ ಜಮೀನುಗಳಿಗೆ ಎರಡು ಎಕರೆವರೆಗೆ 2,000 ರೂ., ನಂತರದ ಹೆಚ್ಚಿನ ಭೂಮಿಗೆ ಪ್ರತಿ ಎಕರೆಗೆ 400 ರೂ., ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೆ 500 ರೂಪಾಯಿ, ನಂತರದ ಹೆಚ್ಚಿನ ಭೂಮಿಗೆ ಪ್ರತಿ ಎಕರೆಗೆ 300 ರೂ. ಶುಲ್ಕ ನಿಗದಿಪಡಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜುದಾರರಿಗೆ ನೋಟಿಸ್ ಶುಲ್ಕ 25 ರೂಪಾಯಿ ನಿಗದಿಪಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...