BIG NEWS : ‘ರಾಮಜನ್ಮಭೂಮಿ’ ಹೋರಾಟಗಾರರ ಬಂಧನ ಖಂಡಿಸಿ ನಾಳೆ ರಾಜ್ಯಾದ್ಯಂತ ‘ಬಿಜೆಪಿ’ ಪ್ರತಿಭಟನೆ

ಬೆಂಗಳೂರು : ಹುಬ್ಬಳ್ಳಿ ಯಲ್ಲಿ ರಾಮಜನ್ಮಭೂಮಿ ಹೋರಾಟಗಾರರ ಬಂಧನ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದ್ದಾರೆ. ಬೆಂಗಳೂರಿನ   ಫ್ರೀಡಂ ಪಾರ್ಕ್ ನಲ್ಲಿ ನಾಳೆ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಹುಬ್ಬಳ್ಳಿಯಲ್ಲಿ 1992ರ ಡಿ.5ರಂದು ಶ್ರೀರಾಮಮಂದಿರಕ್ಕಾಗಿ ನಡೆದಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. 15 ದಿನಗಳ ಹಿಂದೆ, ಡಿ.19ರಂದು ರಾಜು ಧರ್ಮ ದಾಸ ಎಂಬುವರನ್ನು ಹಾಗೂ 2 ದಿನದ ಹಿಂದೆ ಶ್ರೀಕಾಂತ ಪೂಜಾರಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ವಿನಾಶಕಾಲೆ ವಿಪರೀತ ದುರ್ಬುದ್ಧಿ

ವಿನಾಶಕಾಲೆ ವಿಪರೀತ ದುರ್ಬುದ್ಧಿ ” ಹಿಂದೂಗಳ ವಿರುದ್ಧ ದ್ವೇಷ ರಾಜಕಾರಣ ಮಾಡುವುದೇ ರಾಜ್ಯ ಸರ್ಕಾರದ ಆಡಳಿತ ಧ್ಯೇಯ. ಹಾಡುಹಗಲೇ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜಿಹಾದಿಗಳಿಗೆ ಅಮಾಯಕರು, ಬ್ರದರ್ಸ್ಗಳು ಎಂಬ ಪಟ್ಟ ಕಟ್ಟುವ ಕಾಂಗ್ರೆಸ್, ಈಗ 31 ವರ್ಷಗಳ ಹಿಂದಿನ ಪ್ರಕರಣದ ತನಿಖೆಯನ್ನು ಪುನರಾರಂಭಿಸಿ, ಬಂಧಿಸುತ್ತಿರುವುದು ಕಾಂಗ್ರೆಸ್ನ ಹಿಂದೂ ವಿರೋಧಿ ರಾಜಕಾರಣದ ಸುಸ್ಪಷ್ಟ ನಿದರ್ಶನ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದನ್ನು ಸಹಿಸದ ಕಾಂಗ್ರೆಸ್, ಹಿಂದೂಗಳ ವಿರುದ್ಧ ಇನ್ನಿಲ್ಲದ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

https://twitter.com/BJP4Karnataka/status/1742068796167426549

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read