ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ರಾತ್ರಿ ಪಾಳಿ ಕಾರ್ಯ ನಿರ್ವಹಿಸುವ 1,600 ಚಾಲಕರಿಗೆ ಅರ್ಧ ಲೀಟರ್ ನ ಥರ್ಮೋ ಪ್ಲಾಸ್ಕ್ ಗಳನ್ನು ವಿತರಿಸಲಾಗಿದೆ.
ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಕೆಎಸ್ಆರ್ಟಿಸಿ ವಾಹನಗಳು ರಾತ್ರಿ ವೇಳೆ ಕಾರ್ಯಾಚರಣೆಯಲ್ಲಿದ್ದಾಗ ಬೆಳಗ್ಗಿನ ಜಾವ ಮೂರರಿಂದ ನಾಲ್ಕು ಗಂಟೆ ಸಮಯದಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿರುವುದು ಕಂಡು ಬಂದಿದೆ.
ಪ್ರಯಾಣಿಕರಿಗೆ ಸುರಕ್ಷತೆ ಸೇವೆ ಒದಗಿಸುವ ಮತ್ತು ಚಾಲಕರ ಕಾರ್ಯಕ್ಷಮತೆ ಉತ್ತಮಪಡಿಸಿಸುವ ಉದ್ದೇಶದಿಂದ ಅವಧಿಯಲ್ಲಿ ಕಾಫಿ, ಟೀ ಸೇವಿಸಲು ಅನುಕೂಲವಾಗುವಂತೆ ಚಾಲಕರಿಗೆ ಥರ್ಮೋ ಪ್ಲಾಸ್ಕ್ ವಿತರಿಸಲಾಗಿದೆ. ನಿದ್ದೆ ಮಂಪರು ಬಂದರೆ ಕಾಫಿ, ಟೀ, ಕುಡಿಯಲು ಅನುಕೂಲವಾಗಲಿದೆ. ಹೋಟೆಲ್ ಗಳಿಂದ ಕಾಫಿ, ಟೀ ತುಂಬಿಸಿಕೊಂಡು ಬೆಳಗಿನ ಜಾವ ಸೇವಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.