ಎಚ್ಚರ: ಸೀನು ಅಥವಾ ಕೆಮ್ಮನ್ನು ಬಲವಂತವಾಗಿ ತಡೆಯುತ್ತೀರಾ ? ಇದು ಅಪಾಯಕಾರಿ…!

ಚಳಿಗಾಲ ಬಂತೆಂದರೆ ಎಲ್ಲರಿಗೂ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ. ಆರಂಭದಲ್ಲಿ ನಿರಂತರ ಸೀನು ನಂತರ ಕೆಮ್ಮು ನಮ್ಮನ್ನು ಬಿಡದೇ ಕಾಡುತ್ತದೆ. ಕೆಲವೊಮ್ಮೆ ಒಂದಾದ ಮೇಲೊಂದರಂತೆ ಸೀನು ಬರುತ್ತಲೇ ಇರುತ್ತದೆ. ಅನೇಕರು ಸೀನು ಬಂದಾಗ ಬಲವಂತವಾಗಿ ಅದನ್ನು ತಡೆಯುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ.

ಕಚೇರಿಯಲ್ಲಿದ್ದಾಗ ಅಥವಾ ಸ್ನೇಹಿತರ ಜೊತೆಗಿದ್ದಾಗ ಕೆಲವರು ಜೋರಾಗಿ ಸೀನಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಸೀನು ಬಂದಾಗ ಅದನ್ನು ತಡೆಯುತ್ತಾರೆ. ಕೊರೋನಾ ಸಾಂಕ್ರಾಮಿಕದ ಸಮಯದಲ್ಲಂತೂ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿತ್ತು. ಯಾರಾದರೂ ಸೀನಿದರೆ ಸಾಕು ಜನರು ಅವರನ್ನು ಭಯದಿಂದ ವಿಚಿತ್ರವಾಗಿ ನೋಡಲಾರಂಭಿಸುತ್ತಿದ್ದರು. ಆ ಜಾಗದಿಂದ ದೂರ ಓಡುತ್ತಿದ್ದರು. ಹಾಗಾಗಿ ಇದರಿಂದ ಮುಜುಗರಕ್ಕೊಳಗಾದ ಅನೇಕರು ಸೀನು ಬಂದಾಗ ಅದನ್ನು ತಡೆಹಿಡಿಯಲಾರಂಬಿಸಿದರು.

ಸೀನುವಿಕೆಯನ್ನು ತಡೆಹಿಡಿದಾಗ ಏನಾಗುತ್ತದೆ ?

ಸೀನುವಿಕೆಯನ್ನು ನಿಲ್ಲಿಸುವುದು ಅಪಾಯಕಾರಿ. ಈ ರೀತಿ ಮಾಡಲೇಬಾರದು ಎನ್ನುತ್ತಾರೆ ವೈದ್ಯರು. ವಾಸ್ತವವಾಗಿ ನಾವು ಕೆಮ್ಮುವಾಗ ಅಥವಾ ಸೀನುವಾಗ ದೇಹದಲ್ಲಿ ಒತ್ತಡ ಉಂಟಾಗುತ್ತದೆ. ಇದು ಶ್ವಾಸಕೋಶದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಸೀನುವುದನ್ನು ಬಲವಂತವಾಗಿ ನಿಲ್ಲಿಸಿದರೆ ಈ ಒತ್ತಡವು 10 ಪಟ್ಟು ಹೆಚ್ಚಾಗುತ್ತದೆ. ಈ ಒತ್ತಡ ದೇಹದ ದುರ್ಬಲ ಭಾಗಗಳಿಗೆ ತೀವ್ರ ಹಾನಿ ಮಾಡಬಹುದು. ಇದು ಕಿವಿ ಮತ್ತು ಕಣ್ಣುಗಳ ಮೇಲೂ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಪ್ರತಿ ಬಾರಿ ಸೀನು ಅಥವಾ ಕೆಮ್ಮು ಬಂದಾಗ ಅದನ್ನು ತಡೆಯಬಾರದು. ಕರವಸ್ತ್ರ ಹಿಡಿದು ಮುಕ್ತವಾಗಿ ಸೀನಬೇಕು.

ಆರೋಗ್ಯವಂತ ವ್ಯಕ್ತಿಯ ದೇಹವು ಈ ಒತ್ತಡವನ್ನು ತಡೆದುಕೊಳ್ಳುತ್ತದೆ. ಆದರೆ ದೇಹವು ದುರ್ಬಲವಾಗಿದ್ದಾಗ ಅಪಾಯವಾಗಬಹುದು. ವಿಶೇಷವಾಗಿ ಆಲ್ಕೋಹಾಲ್ ಸೇವಿಸುವವರು ಅಥವಾ ಸಿಗರೇಟ್ ಸೇದುವವರು ಸೀನು ಮತ್ತು ಕೆಮ್ಮನ್ನು ತಡೆದರೆ ಅವರ ಉಸಿರಾಟದ ಪ್ರದೇಶ ಅಥವಾ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read