![](https://kannadadunia.com/wp-content/uploads/2023/12/Agricultural-Labour-Certificate.jpg)
ಬೆಂಗಳೂರು : ಜಮೀನು ದಾಖಲೆಗಳನ್ನು ಪಡೆಯಲು ಈಗ ಕೃಷಿ ಕೂಲಿ ಕಾರ್ಮಿಕರು ಕಚೇರಿಗಳಿಗೆ ಅಲೆಯಬೇಕಿಲ್ಲ, ಕಚೇರಿಗಳ ಎದುರು ಗಂಟೆಗಟ್ಟಲೇ ಕಾಯುವ ಅಗತ್ಯವೂ ಇಲ್ಲ, ಇನ್ಮುಂದೆ ಬಾಪೂಜಿ ಸೇವಾ ಕೇಂದ್ರದಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಟಲ್‌ಜೀ ಕೃಷಿ ಕಾರ್ಮಿಕ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಕೃಷಿ ಕಾರ್ಮಿಕ ದೃಢೀಕರಣ ಪತ್ರ ಪಡೆಯಲು ಸಲ್ಲಿಸಬೇಕಾದ ಕಡ್ಡಾಯ ದಾಖಲೆಗಳು
ಪಡಿತರ ಚೀಟಿ
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ಪಹಣಿ ಪತ್ರ
ಕಾರ್ಯ ವಿಧಾನ: ಭೂಮಿ ಆನ್‌ಲೈನ್ ನಲ್ಲಿ ಪಹಣಿಯನ್ನು ವೀಕ್ಷಿಸಿ, ಪಹಣಿಯಲ್ಲಿ ಅರ್ಜಿದಾರರ ಹೆಸರು ಇದ್ದಲ್ಲಿ, ಪಹಣಿಯ ಆಧಾರದ ಮೇಲೆ ಒಂದು ದಿನದ ಸೇವೆಯಾಗಿ (ONE DAY SERVICE) ಪ್ರಮಾಣ ಪತ್ರ ವಿತರಿಸುವುದು. ಪಹಣಿಯಲ್ಲಿ ಅರ್ಜಿದಾರರ ಹೆಸರು ಇಲ್ಲದಿದ್ದಲ್ಲಿ, ಗ್ರಾಮ ಲೆಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡುವುದು ಅಥವಾ ಗ್ರಾಮ ಲೆಕ್ಕಿಗರಿಂದ ವಂಶವೃಕ್ಷವನ್ನು ಪಡೆಯುವುದು. (ಅರ್ಜಿದಾರರಿಂದ ಅಥವಾ ಇಲಾಖೆ ವತಿಯಿಂದ) ಪ್ರಮಾಣ ಪತ್ರ ವಿತರಿಸಲಾಗುತ್ತದೆ.