ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಭಾರತೀಯ ಮೂಲದ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೋರ್ಟ್ವರ್ತ್ ಬಳಿಯ ಜಾನ್ಸನ್ ಕೌಂಟಿ ಬಳಿ ಮಂಗಳವಾರ ಸಂಜೆ ಮಿನಿವ್ಯಾನ್ ಮತ್ತು ಪಿಕಪ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆ (ಡಿಪಿಎಸ್) ತಿಳಿಸಿದೆ.
ಮಿನಿವ್ಯಾನ್ ನಲ್ಲಿದ್ದ ಒಂದೇ ಕುಟುಂಬದ ಏಳು ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಒಬ್ಬರಾದ 43 ವರ್ಷದ ಲೋಕೇಶ್ ಎಂಬುವರು ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
ಮೃತರನ್ನು ಜಾರ್ಜಿಯಾದ ಆಲ್ಫಾರೆಟ್ಟಾ ಮೂಲದ 36 ವರ್ಷದ ಮಹಿಳೆ, ನವೀನ ಪೋತಬತುಲಾ (64 ವರ್ಷದ ಪುರುಷ), ನಾಗೇಶ್ವರರಾವ್ ಪೊನ್ನಡ್ (60 ವರ್ಷದ ಮಹಿಳೆ), ಸೀತಾಮಹಾಲಕ್ಷ್ಮಿ ಪೊನ್ನಡ, 10 ವರ್ಷದ ಬಾಲಕ ಕೃತಿಕ್ ಪೋತಬತುಲಾ ಮತ್ತು 9 ವರ್ಷದ ಬಾಲಕಿ ನಿಶಿಧಾ ಪೊಟಬತುಲಾ ಎಂದು ಗುರುತಿಸಲಾಗಿದೆ.