ಬೆಂಗಳೂರು: ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡ ಬುಧವಾರ ಆರೋಪಿ ಮನೋರಂಜನ್ ಸಂಪರ್ಕದಲ್ಲಿದ್ದ ಯುವತಿಯನ್ನು ವಿಚಾರಣೆ ನಡೆಸಿದೆ.
ಕಳೆದ 10 ದಿನಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟಿರುವ ದೆಹಲಿ ಪೊಲೀಸರು ಮೈಸೂರಿನ ಯುವತಿಯ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮನೋರಂಜನ್ ಅವರ ಫೋನ್ನ ಕರೆ ದಾಖಲೆಗಳನ್ನು ಅಧ್ಯಯನ ಮಾಡಿದ ನಂತರ ಪೊಲೀಸರು ಯುವತಿಯ ವಿವರಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಮನೋರಂಜನ್ ಯುವತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಇವರಿಬ್ಬರು ಬಹಳ ದೀರ್ಘ ಸಂಭಾಷಣೆ ನಡೆಸಿದರು ಈ ಹಿನ್ನೆಲೆಯಲ್ಲಿ ಪೊಲೀಸರು ಯುವತಿಯ ವಿಚಾರಣೆ ನಡೆಸಿದ್ದಾರೆ.