ಮಾಗಡಿ: ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದ ಮಾಗಡಿಯ ಹಿಂದಿನ ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್ ಅವರಿಗೆ ಮಾಹಿತಿ ಹಕ್ಕು ಆಯೋಗ 25000 ರೂ. ದಂಡ ವಿಧಿಸಿದೆ.
ಕರ್ನಾಟಕ ಬಹುಜನ ಚಳವಳಿ ಸಂಘಟನೆ ಜಿಲ್ಲಾಧ್ಯಕ್ಷ ನರಸಾಪುರದ ಕಿರಣ್ ಗ್ರಾಮದ ಸರ್ವೇ ನಂಬರ್ 1ರ ಮೂಲ ದಾಖಲೆಗಳನ್ನು ನೀಡುವಂತೆ 2022ರ ಜೂನ್ 4ರಂದು ಮಾಹಿತಿ ಹಕ್ಕು ಕಾಯ್ದೆ ಇಡಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದು, 30 ದಿನ ಕಳೆದರೂ ತಹಶೀಲ್ದಾರ್ ಮಾಹಿತಿ ನೀಡದೇ ವಿಳಂಬ ಮಾಡಿದ್ದಾರೆ.
ಹೀಗಾಗಿ ಅರ್ಜಿದಾರರು ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಸಕಾಲದಲ್ಲಿ ಮಾಹಿತಿ ನೀಡದೆ ಬೇಜವಾಬ್ದಾರಿ ಹೇಳಿಕೆ ನೀಡಿ ಕಚೇರಿಗೆ ಅಲೆಯುವಂತೆ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಮಾಡಿದ್ದರು. ಅವರು ಈಗ ಬೆಂಗಳೂರಿನ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಹಿತಿ ನೀಡಲು ವಿಳಂಬ ಮಾಡಿದ ಕಾರಣಕ್ಕೆ ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಮಾಹಿತಿ ಹಕ್ಕು ಆಯೋಗ ಕ್ರಮಕೈಗೊಂಡಿದ್ದು, 25,000 ರೂ. ದಂಡ ವಿಧಿಸಿದೆ.