
ನಿಕರಾಗುವಾ: ಮಾನವ ಕಳ್ಳಸಾಗಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಫ್ರಾನ್ಸ್ ನಲ್ಲಿ ಸಿಲುಕಿಗೊಂಡಿದ್ದ 303 ಪ್ರಯಾಣಿಕರನ್ನು ಹೊತ್ತ ಚಾರ್ಟರ್ ವಿಮಾನ ಮಂಗಳವಾರ ಮುಂಜಾನೆ ಮುಂಬೈಗೆ ಬಂದಿಳಿದಿದೆ.
ಏರ್ಬಸ್ ಎ 340 ವಿಮಾನವು ಮುಂಜಾನೆ 4 ಗಂಟೆಯ ನಂತರ ಮುಂಬೈಗೆ ಬಂದಿಳಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದು ಸ್ಥಳೀಯ ಕಾಲಮಾನ ಮಧ್ಯಾಹ್ನ 2.30ರ ಸುಮಾರಿಗೆ ಪ್ಯಾರಿಸ್ ಬಳಿಯ ವಾಟ್ರಿ ವಿಮಾನ ನಿಲ್ದಾಣದಿಂದ ಹೊರಟಿತ್ತು.
ಫ್ರೆಂಚ್ ಅಧಿಕಾರಿಗಳ ಪ್ರಕಾರ, ಮುಂಬೈಗೆ ಹೊರಟಾಗ ವಿಮಾನದಲ್ಲಿ 303 ಪ್ರಯಾಣಿಕರಿದ್ದರು, ಇತರ ಇಬ್ಬರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು, ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಫ್ರೆಂಚ್ ಸುದ್ದಿ ಚಾನೆಲ್ ತಿಳಿಸಿದೆ.
ವಿಮಾನವು ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ವಿಮಾನದಲ್ಲಿದ್ದ 303 ಭಾರತೀಯ ಪ್ರಯಾಣಿಕರಲ್ಲಿ 11 ಅಪ್ರಾಪ್ತ ವಯಸ್ಕರು ಇದ್ದರು ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.