HomeIndiaSHOCKING NEWS: ಇಲಿ ಕಚ್ಚಿ 40 ದಿನಗಳ ಕಂದಮ್ಮ ಸಾವು

SHOCKING NEWS: ಇಲಿ ಕಚ್ಚಿ 40 ದಿನಗಳ ಕಂದಮ್ಮ ಸಾವು

ತೆಲಂಗಾಣ: ಮಗುವಿನ ಮೂಗಿಗೆ ಇಲಿ ಕಚ್ಚಿದ ಪರಿಣಾಮ 40 ದಿನಗಳ ಕಂದಮ್ಮ ಮೃತಪಟ್ಟಿರುವ ಘಟನೆ ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ನಾಗನೂಲು ಗ್ರಾಮದ ಲಕ್ಷ್ಮೀಕಲಾ ಹಾಗೂ ಶಿವಾ ದಂಪತಿಯ ಮಗು ಮೃತ ಕಂದಮ್ಮ. ಹೆರಿಗೆಗಾಗಿ ಲಕ್ಷ್ಮೀಕಲಾ ತವರಿಗೆ ಬಂದಿದ್ದಳು. 40 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ದಿನಗಳ ಹಿಂದೆ ಮಗುವಿನ ಮೂಗಿಗೆ ಇಲಿ ಕಚ್ಚಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದಂತೆ ಮಗುವನ್ನು ನಾಗರ್ ಕರ್ನೂಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಗೆ ಕರೆದೊಯ್ಯಲು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ಮಗುವನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ಮನೆಯಲ್ಲಿ ಇಲಿಗಳು ಓಡಾಡುತ್ತಿದ್ದರೂ ಮಗುವಿನ ಬಗ್ಗೆ ಕಾಳಜಿ ವಹಿಸದ ಕಾರಣ ದುರಂತ ಸಂಭವಿಸಿದೆ ಎಂದು ಲಕ್ಷ್ಮೀಕಲಾ ಪತಿ ಮನೆಯವರು ಆರೋಪಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular