ಪ್ರಯಾಣಿಕರಿಂದ ತುಂಬಿದ್ದ ರೈಲಿನಲ್ಲಿ ಯುವಕನೊಬ್ಬನ ಜುಗಾಡ್ ಐಡಿಯಾ ಕೈಕೊಟ್ಟಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದಿಂದ ಹೊರಡುವ ರೈಲಿನ ಕೋಚ್ ವೊಂದರಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಈ ವೇಳೆ ಮಲಗಲು ಆರಾಮದಾಯಕ ಸ್ಥಳವನ್ನು ಹುಡುಕುವ ಪ್ರಯತ್ನದಲ್ಲಿ ಯುವಕನೊಬ್ಬ ಬೆಡ್ ಶೀಟ್ ವೊಂದನ್ನು ಕಂಬಿಗಳಿಗೆ ಕಟ್ಟಿ ಉಯ್ಯಾಲೆ ಮಾಡಿಕೊಳ್ಳಲು ಮುಂದಾದ.
ಅದರಂತೆ ಉಯ್ಯಾಲೆ ಸಿದ್ಧಪಡಿಸಿಕೊಂಡ ಆತ ಮಲಗಲೆಂದು ಉಯ್ಯಾಲೆಯೊಳಕ್ಕೆ ಇಳಿಯತ್ತಿದ್ದಂತೆ ಆತನ ತೂಕ ತಾಳಲಾರದೇ ಉಯ್ಯಾಲೆ ಕಿತ್ತುಕೊಂಡಿತು. ಇದರಿಂದ ಯುವಕ ತಕ್ಷಣ ಕೆಳಗೆ ಬೀಳುತ್ತಾನೆ. ಕೆಳಗಿದ್ದ ಇತರೆ ಪ್ರಯಾಣಿಕರ ಮೇಲೆ ಆತ ಬಿದ್ದಿದ್ದರಿಂದ ಇತರ ಪ್ರಯಾಣಿಕರಿಗೆ ಗಾಯವಾಯಿತು. ಯುವಕನ ಕೆಲಸದಿಂದ ಕೆರಳಿದ ಮಹಿಳೆಯೊಬ್ಬರು ಯುವಕನನ್ನು ಹಿಗ್ಗಾಮುಗ್ಗಾ ಬೈತಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಕಿಕ್ಕಿರಿದ ರೈಲುಗಳನ್ನು ಪರಿಶೀಲಿಸಲು ಮತ್ತು ಟಿಕೆಟ್ ಇಲ್ಲದೇ ಪ್ರಯಾಣಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.