
ಬೆಂಗಳೂರು: ಎಲಿವೇಟೆಡ್ ಕರ್ನಾಟಕ ಯೋಜನೆಯಡಿ ಸ್ಟಾರ್ಟ್ ಆಫ್ ಗಳಿಗೆ ದನ ಸಹಾಯ ನೀಡುವ ಅವಧಿಯನ್ನು ಜನವರಿ 1ರವರೆಗೆ ವಿಸ್ತರಿಸಲಾಗಿದೆ.
ಯೋಜನೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಡಿಸೆಂಬರ್ 23ರ ವರೆಗೆ ಇದ್ದ ಅರ್ಜಿ ಸಲ್ಲಿಕೆ ಕಾಲಾವಕಾಶವನ್ನು ಜನವರಿ 1ರವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಹೊಸ ಹೊಸ ಸ್ಟಾರ್ಟ್ ಅಪ್ ಗಳಿಂದ ವಿನೂತನ ಚಿಂತನೆ ಹೊರತಂದು ಅದನ್ನು ಪೋಷಿಸುವ ಜೊತೆಗೆ ವಿವಿಧ ಹಂತದ ಹಣಕಾಸು ನೆರವು ನೀಡುವ ಉದ್ದೇಶದಿಂದ ಎಲಿವೇಟೆಡ್ ಕರ್ನಾಟಕ ಯೋಜನೆ ರೂಪಿಸಲಾಗಿದೆ. 50 ಲಕ್ಷ ರೂ. ವರೆಗೆ ಅನುದಾನ ನೀಡಲಾಗುವುದು ಯೋಜನೆಯ ಉದ್ದೇಶವಾಗಿದೆ. ಹೆಚ್ಚಿನ ವಿವರ ಅರ್ಜಿ ಸಲ್ಲಿಕೆಗೆ ಸ್ಟಾರ್ಟ್ ಆಫ್ ಕರ್ನಾಟಕ missionstartupKarnataka.org ವೆಬ್ಸೈಟ್ ಗಮನಿಸಬಹುದಾಗಿದೆ.