HomeEntertainment'ರಂಗಸಮುದ್ರ' ಚಿತ್ರದ ಮತ್ತೊಂದು ಹಾಡು ರಿಲೀಸ್ ಎಂಎಂ ಕೀರವಾಣಿ ಧ್ವನಿಗೆ ಸಂಗೀತ ಪ್ರಿಯರು ಫಿದಾ

‘ರಂಗಸಮುದ್ರ’ ಚಿತ್ರದ ಮತ್ತೊಂದು ಹಾಡು ರಿಲೀಸ್ ಎಂಎಂ ಕೀರವಾಣಿ ಧ್ವನಿಗೆ ಸಂಗೀತ ಪ್ರಿಯರು ಫಿದಾ

‘ರಂಗಸಮುದ್ರ’ ಚಿತ್ರವನ್ನು ಜನವರಿ 12ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಚಿತ್ರತಂಡ ಇದೀಗ ಲಿರಿಕಲ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, ಗಾನ ಪ್ರಿಯರು ಫಿದಾ ಆಗಿದ್ದಾರೆ. ‘ಹತ್ತೂರಿನ ದೀಪ’ ಎಂಬ ಈ ಹಾಡಿಗೆ ದೇಸಿ ಮೋಹನ್ ಅವರ ಸಂಗೀತ, ವಾಗೀಶ್ ಚನ್ನಗಿರಿ ಅವರ ಸಾಹಿತ್ಯವಿದೆ.

ಈ ಚಿತ್ರಕ್ಕೆ ರಾಜಕುಮಾರ ಅಸ್ಕಿ ಆಕ್ಷನ್ ಕಟ್ ಹೇಳಿದ್ದು, ಹೊಯ್ಸಳ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಹೊಯ್ಸಳ ಕೋಣನೂರ್ ನಿರ್ಮಾಣ ಮಾಡಿದ್ದಾರೆ. ರಂಗಾಯಣ ರಘು ಸೇರಿದಂತೆ ಸಂಪತ್ ರಾಜ್, ದಿವ್ಯ ಗೌಡ, ಕಾರ್ತಿಕ್ ವರದರಾಜ್, ಕೋಕಿಲ, ಉಗ್ರಂ ಮಂಜು, ಮಿಮಿಕ್ರಿ ಗೋಪಿ, ಸ್ಕಂದ, ಪ್ರೀತಮ್, ಗುರುರಾಜ್ ಹೊಸಕೋಟೆ, ಸದಾನಂದ, ಹಾಗೂ ಮಹೇಂದ್ರ, ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular