![](https://kannadadunia.com/wp-content/uploads/2022/03/stray-dogs-generic_650x400_71525256961.jpg)
ಬೆಂಗಳೂರು : ರಾಜ್ಯದಲ್ಲಿ 2023ರ ಜನವರಿ 1ರಿಂದ ನವೆಂಬರ್ ಅಂತ್ಯದವರೆಗೆ 2,15,403 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ಆಘಾತಕಾರಿ ಮಾಹಿತಿ ಹೊರಬಂದಿದೆ.
ಆರೋಗ್ಯ ಇಲಾಖೆಯ ವರದಿಯ ಪ್ರಕಾರ, ಶೇ.10ರಷ್ಟು ಜನರು ಸಾಕು ನಾಯಿ ಕಡಿತಕ್ಕೆ ಒಳಗಾದರೆ, ಉಳಿದ ಶೇ.90ರಷ್ಟು ಮಂದಿ ಬೀದಿ ನಾಯಿಗಳ ಕಡಿತಕ್ಕೆ ತುತ್ತಾಗಿದ್ದಾರೆ. ರಾಜ್ಯದಲ್ಲಿ ವಾರಕ್ಕೆ ಸರಾಸರಿ 5,080, ದಿನವೊಂದಕ್ಕೆ 700 ಡಾಗ್ ಬೈಟ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.
ಈ ಪೈ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11.5 ಸಾವಿರ, ಉಡುಪಿಯಲ್ಲಿ 11 ಸಾವಿರ ಚಿತ್ರದುರ್ಗದಲ್ಲಿ 10 ಸಾವಿರ, ಧಾರವಾಡದಲ್ಲಿ 6 ಸಾವಿರ ಪ್ರಕರಣಗಳು ವರದಿಯಾಗಿವೆ.