ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಶೀಘ್ರವೇ APL, BPL ಕಾರ್ಡ್ ವಿತರಣೆ ಮಾಡಲು ಆಹಾರ ಇಲಾಖೆ ಮುಂದಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ನೀಡುವುದನ್ನು ನಿಲ್ಲಿಸಲಾಗಿತ್ತು. ರಾಜ್ಯದಲ್ಲಿ2.95 ಅರ್ಜಿಗಳು ಬಾಕಿಯಿದ್ದು, ಶೀಘ್ರವೇ ಪರಿಶೀಲಿಸಿ ಕಾರ್ಡ್ ವಿತರಣೆ ಮಾಡುವಂತೆ ಅಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹೀಗಾಗಿ ಈಗಾಗಲೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ರೇಷನ್ ಕಾರ್ಡ್ ನಲ್ಲಿ ಹೆಸರು ಬಂದಿದೆಯಾ ಅಂತ ಈ ರೀತಿ ಚೆಕ್ ಮಾಡಬಹುದು.
ಮೊದಲಿಗೆ https://ahara.kar.nic.in/Home/EServices ವಿಭಾಗದಲ್ಲಿ ಎಡ ಭಾಗದಲ್ಲಿ ಕಾಣುವ ಈ ಪಡಿತರ ಚೀಟಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮಗೆ ವಿತರಣೆಯಾಗದ ಹೊಸ ಪಡಿತರ ಚೀಟಿ ಲಿಸ್ಟ್ ಎಂಬುದು ಕಾಣಿಸುತ್ತದೆ.
ನಂತರ ನೀವು ನಿಮ್ಮ ಜಿಲ್ಲೆ ಗ್ರಾಮ ಹಾಗೂ ಮತದಾರ ವಿವರಗಳನ್ನು ನೀಡಿ ಗೋ ಎಂದು ಕ್ಲಿಕ್ ಮಾಡಿದರೆ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ.
ನಂತರ ವಿತರಣೆ ಆಗದೇ ಇರುವ ಹೊಸ ರೇಷನ್ ಕಾರ್ಡ್ ಲಿಸ್ಟ್ ಕಾಣುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ಬರಲಿದೆ ಎಂದು ಅರ್ಥ.