ಮೈಸೂರು: ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ಶಂಕು ಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಗೆ ವೈದ್ಯನಾಗಬೇಕು ಎಂಬ ಆಸೆಯಿತ್ತು ಎಂದು ವಿದ್ಯಾರ್ಥಿ ಜೀವನದ ಕನಸನ್ನು ಮೆಲುಕು ಹಾಕಿದರು.
ನಾನು ವೈದ್ಯನಾಗಬೇಕು ಎಂದು ಆಸೆಪಟ್ಟಿದ್ದೆ. ಆದ್ರೆ ಮಾರ್ಕ್ಸ್ ಬರಲಿಲ್ಲ. ಹಾಗಾಗಿ ಮೆಡಿಕಲ್ ಸೀಟ್ ಸಿಗಲಿಲ್ಲ. ಒಂದು ರೀತಿ ನಾನು ವೈದ್ಯನಾಗದಿರುವುದೇ ಒಳ್ಳೆಯದಾಯ್ತು. ಈಗ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದರು.
ನಾನು ಓದುತ್ತಿದ್ದ ಕಾಲೇಜಿನ ಬಳಿಯೇ ಮೈಸೂರು ಮೆಡಿಕಲ್ ಕಾಲೇಜು ಇತ್ತು. ಕಾಲೇಜು ಬಳಿಯೇ ಒಂದು ಕ್ಯಾಂಟೀನ್ ಇತ್ತು. ಅಲ್ಲಿ ದೋಸೆ ತಿನ್ನಲು ಹೋಗುತ್ತಿದ್ದೆ. ಆಗ 19 ಪೈಸೆಗೆ ಒಂದು ಮಸಾಲೆ ದೋಸೆ ಸಿಗುತ್ತಿತ್ತು. ನಾನು ಕಾಫಿ ಕುಡಿಯುವುದನ್ನು ಬಿಟ್ಟು 2 ಸೆಟ್ ದೋಸೆ ತಿನ್ನುತ್ತಿದ್ದೆ ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.