ಕನ್ನಡದ ಖ್ಯಾತ ಗೀತಸಾಹಿತಿ ವಿಜಯನಾರಸಿಂಹ ಅವರ ಪುತ್ರಿ ಸವಿತಾ ಪ್ರಸಾದ್ (72) ಅವರು ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸವಿತಾ ಅವರು ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾರೆ.
1951 ರ ಜನವರಿ 4 ರಂದು ಜನಿಸಿದ್ದ ಸವಿತಾ ಮದ್ರಾಸಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದರು.
ತಂದೆಯ ಕೃತಿಗಳನ್ನು ಸಂರಕ್ಷಿಸುವಲ್ಲಿ ಸವಿತಾ ಬಹಳ ಶ್ರಮ ವಹಿಸಿದ್ದರು. ಇನ್ನೂ, ವಿಜಯನಾರಸಿಂಹ ಅವರು ಕಾದಂಬರಿಕಾರರೂ ಹೌದು. ಬದುಕಿನ ಭೈರಾಗಿ, ಶ್ರೀಮಾನ್ ಚಕ್ರಾಯಣ ಕಾದಂಬರಿಗಳ ಜೊತೆಗೆ ಪುಟ್ಟಣ್ಣ ಕಣಗಾಲ್ ಬದುಕನ್ನೂ ಪುಸ್ತಕವಾಗಿಸಿದ್ದಾರೆ. ವಿಜಯನಾರಸಿಂಹ ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರರಾಗಿದ್ದರು. ಹಲವು ಚಲನಚಿತ್ರಗಳಿಗೆ ಅವರು ರಚಿಸಿದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.