![](https://kannadadunia.com/wp-content/uploads/2023/09/Pm-vishwakarma.png)
ಬೆಂಗಳೂರು : ಕೇಂದ್ರ ಸರ್ಕಾರವು ಕುಶಲಕರ್ಮಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೇಂದ್ರ ಸರ್ಕಾರದ ಪಿ.ಎಂ-ವಿಶ್ವಕರ್ಮ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಒಟ್ಟು 18 ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅರ್ಹ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆ ಯಾರಿಗೆ ?
18 ಸಾಂಪ್ರದಾಯಿಕ ಕುಶಲಕರ್ಮಿ ಕೆಲಸಗಾರರಿಗೆ
ಟೈಲರ್, ಗಾರೆ ಕೆಲಸಗಾರರು , ಕ್ಷೌರಿಕರು, ಅಕ್ಕಸಾಲಿಗರು, ಅಗಸರು(ಡೋಬಿ), ಬಡಗಿ (ಮನೆ ಕೆಲಸಗಾರರು), ವಿಗ್ರಹ ತಯಾರಕರು (ಶಿಲ್ಪಿ), ದೋಣಿ ತಯಾರಕರು, ಆಯುಧ ತಯಾರಕರು, ಚಮ್ಮಾರರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಬೀಗ ತಯಾರಕರು, ಕುಂಬಾರರು, ಕಮ್ಮಾರರು, ಬುಟ್ಟಿ ಚಾಪೆ ಕಸ ಪೊರಕೆ ತಯಾರಕರು, ಆಟಿಕೆ ತಯಾರಕರು (ಸಾಂಪ್ರದಾಯಿಕ), ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು.
ಯೋಜನೆಯ ಪ್ರಯೋಜನಗಳು
* ಐದು ದಿನ ತರಬೇತಿ ಪಡೆಯುವವರಿಗೆ ದಿನಕ್ಕೆ 500 ರೂಪಾಯಿ ಸಂಭಾವನೆ
* ತರಬೇತಿ ನಂತರ ರೂಪಾಯಿ 15 ಸಾವಿರ (ಟೂಲ್ ಕಿಟ್ ಖರೀದಿಸಲು)
* ಮೊದಲ ಬಾರಿಗೆ 1 ಲಕ್ಷ ಆಧಾರ ರಹಿತ ಸಾಲ (5% ಬಡ್ಡಿ ದರದಲ್ಲಿ)
18 ತಿಂಗಳೊಳಗೆ ಹಿಂದಿರುಗಿಸಿದರೆ ಮತ್ತೆ ಮೂರು ಲಕ್ಷದ ವರೆಗೂ ಸಾಲ ( 5% ಬಡ್ಡಿ ದರದಲ್ಲಿ)
ಈಗಾಗಲೇ ಈ ಯೋಜನೆಗೆ 11 ಲಕ್ಷಕ್ಕೂ ಅಧಿಕ ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ. ತಮ್ಮ ಅರ್ಜಿ ಬೇಗ ಸಲ್ಲಿಸಿ.
ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ರೇಷನ್ ಕಾರ್ಡ್
* ಮೊಬೈಲ್ ಸಂಖ್ಯೆ