HomeIndiaBIG NEWS: 19 ಜನರಲ್ಲಿ JN.1 ಕೊರೊನಾ ಉಪತಳಿ ಪತ್ತೆ; ಕೋವಿಡ್ ಆಕ್ಟೀವ್ ಕೇಸ್ ಗಳ...

BIG NEWS: 19 ಜನರಲ್ಲಿ JN.1 ಕೊರೊನಾ ಉಪತಳಿ ಪತ್ತೆ; ಕೋವಿಡ್ ಆಕ್ಟೀವ್ ಕೇಸ್ ಗಳ ಸಂಖ್ಯೆ 2,311ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರ ವೈರಸ್ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಈವರೆಗೆ 19 ಜನರಲ್ಲಿ JN.1 ಸೋಂಕು ಪತ್ತೆಯಾಗಿದೆ.

ಕಳೆದ 9 ದಿನಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 938ರಿಂದ 1,970 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ದೇಶಾದ್ಯಂತ ಮಹಾಮಾರಿ ವ್ಯಾಪಕವಾಗಿ ವೇಗವಾಗಿ ಹರಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಕೇರಳದಲ್ಲಿ ಕೊರೊನಾ ಉಪತಳಿ JN.1 ಸೋಂಕಿಗೆ ಈವರೆಗೆ ನಾಲ್ವರು ಬಲಿಯಾಗಿದ್ದು, ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.

ದೇಶದಲ್ಲಿ ಕೋವಿಡ್ ಆಕ್ಟೀವ್ ಕೇಸ್ ಗಳ ಸಂಖ್ಯೆ 2311ಕ್ಕೆ ಏರಿಕೆಯಾಗಿದೆ. ಈವರೆಗೆ 533321 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. 44470346 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.220,67,79,081 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

For Latest News Updates, Join Our Whatsapp Community🚩
RELATED ARTICLES

Most Popular