HomeKarnatakaಸೆಲ್ಫಿ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ

ಸೆಲ್ಫಿ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ

ಬೀದರ್: 19 ವರ್ಷದ ಯುವಕನೊಬ್ಬ ಸೆಲ್ಫಿ ಸ್ಟೇಟಸ್ ಹಾಕಿ ಬಳಿಕ ನೇಣಿಗೆ ಕೊರಳೊಡ್ಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧರ್ಮಪ್ರಕಾಶ್ ಗಲ್ಲಿಯಲ್ಲಿ ನಡೆದಿದೆ.

ಬಾಲಕೃಷ್ಣ ಕರೆಪ್ಪ ನೇಣಿಗೆ ಶರಣಾದ ಯುವಕ. ಪದೇ ಪದೇ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ಬೆದರಿಸುತ್ತಿದ್ದನಂತೆ. ಆದರೆ ಇಂದು ಬೆಳಿಗ್ಗೆ ಸೆಲ್ಫಿ ಸ್ಟೇಟಸ್ ಹಾಕಿದ್ದ ಯುವಕ ಕೆಲ ಹೊತ್ತಲ್ಲೇ ಧರ್ಮಪ್ರಕಾಶ್ ಗಲ್ಲಿಯ ಸಮುದಾಯ ಭವನದಲ್ಲಿ ನೇಣಿಗೆ ಶರಣಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವಕನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮದ್ಯದ ಅಮಲಿನಲ್ಲಿ ನೇಣಿಗೆ ಕೊರಳೊಡ್ಡಿರುವ ಶಂಕೆ ವ್ಯಕ್ತವಾಗಿದೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular