BIG NEWS : ‘ಸಾರಿಗೆ ಇಲಾಖೆ’ ಆದಾಯ ಹೆಚ್ಚಿಸಲು ಸರ್ಕಾರದಿಂದ ಹೊಸ ಪ್ಲ್ಯಾನ್ : ಡಿ.23 ರಿಂದ ‘KSRTC’ ಕಾರ್ಗೊ ಸೇವೆ ಆರಂಭ

ಬೆಂಗಳೂರು : ತನ್ನ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಾದ ಕೆಎಸ್ಆರ್ಟಿಸಿ ಇದೇ ಮೊದಲ ಬಾರಿಗೆ ಲಾರಿ ಖರೀದಿ ಮಾಡುತ್ತಿದ್ದು, ಡಿಸೆಂಬರ್ 23 ರಿಂದ ಈ ಲಾರಿಗಳು ಓಡಲಿವೆ. ರಾಜ್ಯದ ಪ್ರಮುಖ ನಗರಗಳಿಗೆ ಕಾರ್ಗೋ ಸೇವೆ ಲಭ್ಯವಾಗಲಿದೆ.

ಮೊದಲ ಹಂತದಲ್ಲಿ ಕೊರಿಯರ್ ಸರ್ವಿಸ್ ಡಿ.23ರಿಂದ ಆರಂಭವಾಗಲಿದೆ. ಈ ಮೂಲಕ ಸರ್ಕಾರಿ ಉದ್ಯಮವನ್ನು ವಿಸ್ತರಣೆ ಮಾಡುವ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ.ಡೋರ್ ಸ್ಟೆಪ್ ಸೇವೆಯನ್ನು ನೀಡುವ ಉದ್ದೇಶದಿಂದ ಈ ಲಾರಿಗಳನ್ನು ಖರೀಸಲಾಗಿದ್ದು, ಕೆಎಸ್ಆರ್ಟಿಸಿ ಈಗಾಗಲೇ ಬಸ್ಗಳಲ್ಲಿ ಕಾರ್ಗೋ ಸೇವೆಯನ್ನು ಆರಂಭಿಸಿದೆ. ಉತ್ಪಾದನಾ ಘಟಕಗಳಿಂದ ಸರಕುಗಳನ್ನು ಸಾಗಿಸುವವರಿಗೆ ಈ ಸೇವೆ ಅನುಕೂಲವಾಗಿದೆ.

KSRTC  ಪ್ರಯಾಣಿಕರಿಗೆ ಸಾರಿಗೆ ಸೇವೆಯಿಂದ ಗಳಿಸುವ ಆದಾಯದ ಜೊತೆಗೆ, ಪರ್ಯಾಯ ಆದಾಯಕ್ಕಾಗಿ ಕಾರ್ಗೋ ಟ್ರಕ್ ಕಾರ್ಯಚರಣೆಗೆ ಮುಂದಾಗಿದೆ. ಡಿ.23 ರಂದು ಒಟ್ಟು 20 ನಮ್ಮ ಕಾರ್ಗೋ ಪಾರ್ಸೆಲ್ ಮತ್ತು ಕೋರಿಯರ್ ಟ್ರಕ್ ಗಳಿಗೆ ಚಾಲನೆಯನ್ನು ಸಾರಿಗೆ ಸಚಿವರು ನೀಡಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read