ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ- ಸೆಟ್) ಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಇದುವರೆಗೂ ನೋಂದಣಿ ಮಾಡಿಕೊಳ್ಳದವರಿಗೆ ಡಿಸೆಂಬರ್ 18 ಮತ್ತು 19ರಂದು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಪಠ್ಯಕ್ರಮ, ಅರ್ಜಿ ಸಲ್ಲಿಕೆಯ ಲಿಂಕ್ ಮೊದಲಾದ ಮಾಹಿತಿ ಒದಗಿಸಲಾಗಿದೆ ಎಂದು ಕೆಇಎ ತಿಳಿಸಿದೆ. ಅಭ್ಯರ್ಥಿಗಳು ಡಿಸೆಂಬರ್ 22ರ ಸಂಜೆ 5 ಗಂಟೆಯೊಳಗೆ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ನೀಡಿರುವ ಲಿಂಕ್ ನಲ್ಲಿ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಲಾಗಿದೆ.