ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ತೆಲಂಗಾಣ ಮಾಜಿ ಸಿಎಂ ‘ಕೆ ಚಂದ್ರಶೇಖರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಕುರಿತು ಕೆಸಿಆರ್ ಮಗಳು ಕವಿತಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ, ತಂದೆಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಎಲ್ಲ ರೀತಿಯಲ್ಲಿ ಸಹಾಯ ಮಾಡಿದ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ಧನ್ಯವಾದಗಳು.
ಈ ಕಷ್ಟದ ಸಮಯದಲ್ಲಿ ದೇಶಾದ್ಯಂತ ನಾವು ಪಡೆದ ಎಲ್ಲಾ ಆತ್ಮೀಯತೆ ಮತ್ತು ಪ್ರೀತಿ ಕೆಸಿಆರ್ ಮತ್ತು ಇಡೀ ಕುಟುಂಬಕ್ಕೆ ತುಂಬಾ ಹೃದಯಸ್ಪರ್ಶಿಯಾಗಿದೆ. ಎಲ್ಲಾ ಬಿಆರ್ಎಸ್ ಕುಟುಂಬಕ್ಕೆ ನನ್ನ ಕೃತಜ್ಞತೆಗಳು ಎಂದು ಪೋಸ್ಟ್ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ತಡರಾತ್ರಿ ಬಾತ್ ರೂಮ್ ನಲ್ಲಿ ಜಾರಿ ಬಿದ್ದ ಕೆಸಿಆರ್ ಸೊಂಟಕ್ಕೆ ಗಾಯವಾಗಿತ್ತು. ಎರ್ರವೆಲ್ಲಿ ತೋಟದ ಮನೆಯಿಂದ ಅವರನ್ನು ಸೋಮಾಜಿಗುಡದ ಯಶೋದಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸಿಟಿ ಸ್ಕ್ಯಾನ್ ಮಾಡಿ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ್ದರು.
https://twitter.com/RaoKavitha/status/1735570217689141541?ref_src=twsrc%5Etfw%7Ctwcamp%5Etweetembed%7Ctwterm%5E1735570217689141541%7Ctwgr%5E2a56641c0e87fd13ed17501907d738d475e4e9ad%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fformer-telangana-cm-chandrasekhar-rao-discharged-from-hospital%2F