BIGG NEWS : ಪತ್ನಿಗೆ ಕಿರುಕುಳ ಆರೋಪ : ಖ್ಯಾತ ಕಿರುತೆರೆ ನಟನ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಕನ್ನಡದ ನಂದಿನಿ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಟ ನಟ ರಾಹುಲ್ ರವಿ ವಿರುದ್ಧ ಚೆನ್ನೈ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ.

ರಾಹುಲ್ ರವಿ ವಿರುದ್ಧ ಅವರ ಪತ್ನಿ ಕಿರುಕುಳದ ದೂರು ದಾಖಲಿಸಿದ್ದರು. ಇದಾದ ಬಳಿಕ ರಾಹುಲ್ ತಲೆಮರೆಸಿಕೊಂಡಿದ್ದರು. ಇದೀಗ ರಾಹುಲ್ ರವಿ ವಿರುದ್ಧ ಚೆನ್ನೈ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ.ರಾಹುಲ್ ರವಿ ಅವರು ತಮಿಳು ಮತ್ತು ಕನ್ನಡ ಕಿರುತೆರೆಯ ಜನಪ್ರಿಯ ನಟರಾಗಿದ್ದಾರೆ.

ರಾಹುಲ್ ಮತ್ತೊಬ್ಬ ಹುಡುಗಿಯ ಜತೆಗಿನ ಸಂಬಂಧದ ಬಗ್ಗೆ ಲಕ್ಷ್ಮಿ ಕೂಡ ಬಹಿರಂಗಪಡಿಸಿದ್ದರು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಲಕ್ಷ್ಮೀಯವರನ್ನು ವಿವಾಹವಾದ ಮೂರೇ ವರ್ಷಗಳಲ್ಲಿ ಇವರಿಬ್ಬರ ನಡುವೆ ಜಗಳ ಆರಂಭವಾಗಿತ್ತು. ರಾಹುಲ್ ರವಿ ಅವರು ಅಕ್ರಮ ಸಂಬಂಧ ಹೊಂದಿದ್ದಾರೆ . ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಜಗಳವಾಗಿದೆ. ಅಲ್ಲದೇ ರಾಹುಲ್ ಬೆಡ್ರೂಂನಲ್ಲಿ ಯುವತಿ ಇರುವುದು ನೋಡಿದ್ದರು. ಇದರಿಂದ ಸಿಟ್ಟಿಗೆದ್ದ ನಟ ರಾಹುಲ್ ಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದರು. ನಂತರ ಪತ್ನಿ ಲಕ್ಷ್ಮಿ ಗಂಡನ ವಿರುದ್ಧ ಕೇಸ್ ದಾಖಲಿಸಿದ್ದರು. ಪ್ರಕರಣ ಸಂಬಂಧ ಚೆನ್ನೈ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read