ಶಾಪಿಂಗ್ ಮಾಲ್ ನಲ್ಲಿ ಇರುವಷ್ಟೂ ಭದ್ರತೆ ಸಂಸತ್ ನಲ್ಲಿ ಇಲ್ಲದಿರುವುದು ದುರಂತ: ಕಾಂಗ್ರೆಸ್ ಟೀಕೆ

ಬೆಂಗಳೂರು: ಸಂಸತ್ತಿನ ಇತಿಹಾಸದಲ್ಲೇ ಈ ಮಟ್ಟಿನ ಭದ್ರತಾ ಲೋಪವಾಗಿರಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

ಲೋಕಸಭೆಯಲ್ಲಿ ನಡೆದ ಘಟನೆಯ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಡಿಸೆಂಬರ್ 13ರ ಒಳಗೆ ಸಂಸತ್ತನ್ನು ಸ್ಪೋಟಿಸುತ್ತೇವೆ ಎಂದು ಖಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ ನಂತರವೂ ಸಂಸತ್ತಿನ ಭದ್ರತೆಯನ್ನು ನಿರ್ಲಕ್ಷಿಸಿದ್ದೇಕೆ? ದೇಶದ ಶಕ್ತಿ ಕೇಂದ್ರವಾದ ಸಂಸತ್ತಿಗೆ, 20 ಲಕ್ಷ ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಸಂಸತ್ತಿಗೆ ಯಾರು ಬೇಕಿದ್ದರೂ ನುಗ್ಗಬಹುದೇ? ಎಂದು ಪ್ರಶ್ನಿಸಿದೆ.

ಕೇವಲ ಒಂದು ಶಾಪಿಂಗ್ ಮಾಲಿನಲ್ಲಿ ಇರುವಷ್ಟು ಭದ್ರತೆಯೂ ಸಂಸತ್ತಿನಲ್ಲಿಲ್ಲದಿರುವುದು ಬಹುದೊಡ್ಡ ದುರಂತ.ಈ ಕೃತ್ಯಕ್ಕೆ ಕೂಗುಮಾರಿ ಪ್ರತಾಪ್ ಸಿಂಹರ ಸಹಕಾರ ಇರುವುದು ಇನ್ನೊಂದು ದುರಂತ ಎಂದು ಹೇಳಲಾಗಿದೆ.

https://www.facebook.com/100064802796719/posts/pfbid02rCVZfNwk1ZnUUZmXMEikjmMRrTtwX1jnFzMzJD3cvEQQAWfypGBJdtGHLmZKBHz6l/?mibextid=Nif5oz

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read