ಮಂಡ್ಯ: ಶೂದ್ರರು ಎಂದರೆ ವೇಶ್ಯೆಯರ ಮಕ್ಕಳು ಎಂದು ಪ್ರೊ. ಕೆ.ಎಸ್. ಭಗವಾನ್ ಹೇಳಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯ ಜಾರಿಗಾಗಿ ಜನಾಗ್ರಹ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮನುಸ್ಮೃತಿಯ ಪ್ರಕಾರ ಶೂದ್ರರು ಎಂದರೆ ಗುಲಾಮರು, ಸೂಳೆಯರ ಮಕ್ಕಳು. ದೇಶದಲ್ಲಿ ಬ್ರಾಹ್ಮಣರ ಹೊರತುಪಡಿಸಿ ಉಳಿದ ಎಲ್ಲರೂ ಈ ವರ್ಗಕ್ಕೆ ಸೇರುತ್ತಾರೆ ಎಂದು ಹೇಳಿದ್ದಾರೆ.
ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರವೆಂಬ ನಾಲ್ಕು ವರ್ಗಗಳನ್ನು ಮನುಸ್ಮೃತಿ ಗುರುತಿಸಿತ್ತು. ಅದರಲ್ಲಿ ಬ್ರಾಹ್ಮಣರು ಮತ್ತು ಶೂದ್ರರು ಮಾತ್ರ ಉಳಿದಿದ್ದಾರೆ. ಜನಿವಾರ ಹಾಕಿಕೊಳ್ಳದವರೆಲ್ಲರೂ ಶೂದ್ರರೇ, ಬ್ರಾಹ್ಮಣ ಹೆಂಗಸರು ಜನಿವಾರ ಧರಿಸುವುದಿಲ್ಲ. ಅವರು ಕೂಡ ಶೂದ್ರರೇ. ಇದನ್ನು ಹೇಳಲು ಹೋದರೆ ನನ್ನನ್ನೇ ಕೊಂದು ಹಾಕುತ್ತಾರೆ ಎಂದು ಭಗವಾನ್ ಹೇಳಿದ್ದಾರೆ.