ಬ್ರೆಜಿಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 9 ಮಂದಿ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ.
ಬ್ರೆಜಿಲ್ನ ಉತ್ತರ ಪ್ರದೇಶದ ಪ್ಯಾರಾ ರಾಜ್ಯದ ಪುರಸಭೆಯಾದ ಪರೌಪೆಬಾಸ್ ನಗರದ ಲ್ಯಾಂಡ್ ಅಂಡ್ ಲಿಬರ್ಟಿ ಕ್ಯಾಂಪ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ನೆಟ್ವರ್ಕ್ನಲ್ಲಿ ಕೆಲಸ ಮಾಡುತ್ತಿದ್ದ ಇಂಟರ್ನೆಟ್ ಕಂಪನಿಯ ತಂತ್ರಜ್ಞರು ಆಕಸ್ಮಿಕವಾಗಿ ಇಂಟರ್ನೆಟ್ ಕೇಬಲ್ ಅನ್ನು ಹೈ-ವೋಲ್ಟೇಜ್ ಕೇಬಲ್ಗೆ ಸಂಪರ್ಕಿಸಿದ್ದು, ಇದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕ್ಯಾಂಪ್ನ ಎರಡು ಬ್ಯಾರಕ್ಗಳು ತ್ವರಿತವಾಗಿ ಬೆಂಕಿ ಅವರಿಸಿ ಸಂಪೂರ್ಣವಾಗಿ ನಾಶವಾಗಿದ್ದು,, 9 ಮಂದಿ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಭೀಕರ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, 37 ಜನರು ಸುಟ್ಟ ಗಾಯಗಳಿಂದ ನರಳಾಡುತ್ತಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.