HomeKarnatakaBIGG NEWS : ರಾಜ್ಯ ಸರ್ಕಾರದ ವಿರುದ್ಧ ರಣತಂತ್ರ : ಇಂದು ಬೆಳಗಾವಿಯಲ್ಲಿ 'ಬಿಜೆಪಿ ಶಾಸಕಾಂಗ...

BIGG NEWS : ರಾಜ್ಯ ಸರ್ಕಾರದ ವಿರುದ್ಧ ರಣತಂತ್ರ : ಇಂದು ಬೆಳಗಾವಿಯಲ್ಲಿ ‘ಬಿಜೆಪಿ ಶಾಸಕಾಂಗ ಪಕ್ಷದ ಸಭೆ’ ನಿಗದಿ

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಣತಂತ್ರ ಹೂಡಲು ಬಿಜೆಪಿ ನಿರ್ಧರಿಸಿದ್ದು, ಇಂದು ಬೆಳಗಾವಿಯಲ್ಲಿ ವಿಪಕ್ಷ ಆರ್ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ.

ಇಂದು ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬೆಳಗ್ಗೆ ಸದನದ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಶಾಸಕಾಂಗ ಪಕ್ಷದ ನಾಯಕರಾಗಿ ಆರ್ ಅಶೋಕ್ ನೇಮಕಗೊಂಡ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಕಳೆದ ವಾರ ವಿಧಾನಸಭೆಯಲ್ಲಿ ನಡೆದಿದ್ದ ಗೊಂದಲದ ಹಿನ್ನೆಲೆ ಈ ಸಭೆ ಮಹತ್ವ ಪಡೆದಿದೆ.
ಅಧಿವೇಶನದ ಆರಂಭದಲ್ಲೇ ಶಾಸಕಾಂಗ ಸಭೆ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಚರ್ಚಿಸಿ ಶಾಸಕರಿಗೆ ಸಲಹೆ ಹಾಗೂ ಕೆಲವು ಸೂಚನೆ ನೀಡುವುದು ವಾಡಿಕೆಯಾಗಿತ್ತು, ಆದ್ರೆ ಈ ಬಾರಿ ಅಧಿವೇಶನದ ನಡುವೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular