HomeKarnatakaBIG NEWS: ಆರ್.ಡಿ.ಪಾಟೀಲ್ ಗೆ ಮತ್ತೊಂದು ಸಂಕಷ್ಟ; ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

BIG NEWS: ಆರ್.ಡಿ.ಪಾಟೀಲ್ ಗೆ ಮತ್ತೊಂದು ಸಂಕಷ್ಟ; ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

ಕಲಬುರ್ಗಿ: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಆರ್,ಡಿ.ಪಾಟೀಲ್ ವಿರುದ್ಧ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಕಲಬುರ್ಗಿ ಹೈಕೋರ್ಟ್ ಪೀಠ ತೆರವು ಮಾಡಿದೆ.

ರಾಜ್ಯದೆಲ್ಲೆಡೆ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಿಲೀನಗೊಳಿಸಿ ಒಂದೇ ಕಡೆ ವಿಚಾರಣೆ ನಡೆಸಲು ಆರ್.ಡಿ.ಪಾಟೀಲ್ ಮನವಿ ಮಾಡಿದ್ದರು. ಅಲ್ಲಿಯವರೆಗೆ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ತಡೆಯಾಜ್ಞೆ ಪಡೆದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಕಲಬುರ್ಗಿ ಹೈಕೋರ್ಟ್ ಪೀಠ ಈ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಅಲ್ಲದೇ ಎಲ್ಲಾ ಎಫ್ ಐ ಆರ್ ಗಳಿಗೆ ದಾಖಲಾದ ಪ್ರಕರಣಗಳನ್ನು ಒಂದೇ ಕಡೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆರ್.ಡಿ.ಪಾಟೀಲ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪಿಎಸ್ ಐ ನೇಮಕಾತಿ ಅಕ್ರಮ ಕೇಸ್ ನಲ್ಲಿ ಮತ್ತೆ ತನಿಖೆ ನಡೆಯುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

Most Popular