ಪ್ಯಾಕ್ ನಲ್ಲಿ ಬಿಸ್ಕೆಟ್ ಕಡಿಮೆ ಇದ್ದುದಕ್ಕೆ ಬ್ರಿಟಾನಿಯಾ ಕಂಪನಿಗೆ ದಂಡ

ಮಡಿಕೇರಿ: ಪ್ಯಾಕ್ ನಲ್ಲಿ ಬಿಸ್ಕೆಟ್ ತೂಕ ಕಡಿಮೆ ಇದ್ದುದಕ್ಕೆ ಬ್ರಿಟಾನಿಯಾ ಕಂಪನಿಗೆ ದಂಡ ವಿಧಿಸಿ ಕೊಡಗು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಎಂ.ಇ ಅಲಿ ಅವರು ಗೋಣಿಕೊಪ್ಪ ಪಟ್ಟಣದಲ್ಲಿ ಮಾರಿಗೋಲ್ಡ್ ಬಿಸ್ಕೇಟ್ ಖರೀದಿಸಿದ್ದು, ಬಿಸ್ಕೇಟ್‍ಗಳು ಕಡಿಮೆ ಇರುವುದರಿಂದ ತೂಕ ಮಾಡಿಸಿ ನೋಡಿದಾಗ 100 ಗ್ರಾಂ ಇರುವ ಬದಲು 82 ಗ್ರಾಂ ಇದ್ದು, ದೂರನ್ನು ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸಲ್ಲಿಸಿರುತ್ತಾರೆ.

ನ್ಯಾಯಾಲಯವು ಎರಡು ಕಡೆ ವಾದಗಳನ್ನು ಆಲಿಸಿದಾಗ ಬ್ರಿಟಾನಿಯಾ ಇಂಡಸ್ಟ್ರೀ ಸ್‍ರವರು ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿರುವುದು ಸಾಬಿತು ಆಗಿರುತ್ತದೆ. ಆದ್ದರಿಂದ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗವು ದೂರುದಾರರಿಗೆ ಬ್ರಿಟಾನಿಯ ಇಂಡಸ್ಟ್ರೀಸ್ ಇವರಿಂದ 10 ಸಾವಿರ ರೂ. ಪರಿಹಾರ ಮೊತ್ತವಾಗಿ ಮತ್ತು 20 ಸಾವಿರ ರೂ. ಮಾನಸಿಕ ವೇದನೆಗಾಗಿ ಮತ್ತು ಖರ್ಚು ವೆಚ್ಚಗಳಿಗಾಗಿ ಪಾವತಿಸಲು ಆದೇಶ ನೀಡಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read