alex Certify ಗಮನಿಸಿ : SFC ಮುಕ್ತ ನಿಧಿ ಅನುದಾನದಡಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : SFC ಮುಕ್ತ ನಿಧಿ ಅನುದಾನದಡಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಮಡಿಕೇರಿ : ಮಡಿಕೇರಿ ನಗರಸಭೆಯ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಡಿ 2023-24 ನೇ ಸಾಲಿನ ಅನುಮೋದಿತ ಕ್ರಿಯಾ ಯೋಜನೆಯಂತೆ ಶೇ.24.10 ರ ಪರಿಶಿಷ್ಟ ಜಾತಿ/ ಪಂಗಡದ, ಶೇ.7.25 ರ ನಗರ ಬಡ ಜನರ ಕಲ್ಯಾಣ ಕಾರ್ಯಕ್ರಮ ಹಾಗೂ ಶೇ.5 ರ ಅಂಗವಿಕಲರ ಅಭಿವೃದ್ದಿ ಯೋಜನೆಯಡಿ ವೈಯಕ್ತಿಕ ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಹಾಗೂ ಮುಂದೆ ಅಗತ್ಯ ಪಡಿಸಬಹುದಾದ ಇತರೆ ದಾಖಲಾತಿಗಳನ್ನು ನೀಡುವ ಷರತ್ತಿಗೆ ಒಳಪಡಿಸಿದೆ. ಅರ್ಜಿ ಸಲ್ಲಸಲು ಡಿಸೆಂಬರ್, 26 ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ನಗರಸಭೆ ಕಚೇರಿಯಲ್ಲಿ ಪಡೆಯಬಹುದಾಗಿದೆ.

ಶೇ.24.10 (ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮ): ನಿವೇಶನ ಹೊಂದಿರುವ ಫಲಾನುಭವಿಗಳ ಮನೆಯ ಮೇಲ್ಚಾವಣಿ ದುರಸ್ತಿಗಾಗಿ ಸಹಾಯಧನ ನೀಡುವುದು. 4.16 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-3 ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರ ತಕ್ಕದು, ಮನೆಯ ಫೋಟೊ, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.
ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಿಗೆ ಸಹಾಯಧನ 0.41 ಲಕ್ಷ (2021-22 ನೇ ಸಾಲಿನ) ರೂ. ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಶಸ್ತ್ರ ಚಿಕಿತ್ಸಗೆ ಸಂಬಂಧ ಪಟ್ಟಂತೆ ದಾಖಲಾತಿಗಳು, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ಶೇ.24.10 (ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮ):-ನಿವೇಶನ ಹೊಂದಿರುವ ಫಲಾನುಭವಿಗಳ ಮನೆಯ ಮೇಲ್ಚಾವಣಿ ದುರಸ್ತಿಗಾಗಿ ಸಹಾಯಧನ ನೀಡುವುದು. 1.60 ಲಕ್ಷ ರೂ. ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-3 ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರಬೇಕು, ಮನೆಯ ಫೋಟೊ, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಿಗೆ ಸಹಾಯಧನ 0.90 ಲಕ್ಷ (2020-21 ನೇ ಸಾಲಿನ) ರೂ. ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಶಸ್ತ್ರ ಚಿಕಿತ್ಸೆಗೆ ಸಂಬಂಧಪಟ್ಟಂತೆ ದಾಖಲಾತಿಗಳು, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ 0.75 ಲಕ್ಷ (2021-22 ನೇ ಸಾಲಿನ) ರೂ. ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-3 ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರಬೇಕು. ಮನೆಯ ಫೋಟೊ, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ 0.69 ರೂ. ಕಾಯ್ದಿರಿಸಲಾಗಿದೆ. ಜಾತಿ/ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ವ್ಯಾಸಾಂಗ ದೃಢೀಕರಣ ಪತ್ರ ಸಲ್ಲಿಸಬೇಕು.
ಶೇ.7.25 (ನಗರ ಬಡಜನರ ಕಲ್ಯಾಣ ಕಾರ್ಯಕ್ರಮ ): ನಿವೇಶನ ಹೊಂದಿರುವ ಫಲಾನುಭವಿಗಳ ಮನೆಯ ಮೇಲ್ಚಾವಣಿ ದುರಸ್ತಿಗಾಗಿ ಸಹಾಯಧನ ನೀಡುವುದು. 2.18 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-3 ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರ ತಕ್ಕದು, ಮನೆಯ ಫೋಟೊ, ಪಾಸ್ ಪುಸ್ತಕ,
ಶೇ.5 ರಷ್ಟು (ಅಂಗವಿಕಲರ ಕಲ್ಯಾಣ ಕಾರ್ಯಕ್ರಮ): ರಾಜ್ಯ/ ರಾಷ್ಟ್ರ ಮಟ್ಟದ ಕಲೆ, ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಅಂಗವಿಕಲ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. 1.87 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಪಾಸ್ ಪುಸ್ತಕ, ಅಂಗವಿಕಲರ ಧೃಢೀಕರಣ ಪತ್ರ. ಕಲೆ ಕ್ರೀಡೆ ಸಾಂಸ್ಕøತಿಕ ಚಟುವಟಿಕೆಯಲ್ಲಿ ಭಾಗವಹಿಸಿರುವ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರಾದ ವಿಜಯ್ ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...