HomeKarnatakaಕರೆಂಟ್ ಕಳ್ಳತನ ಆರೋಪದಲ್ಲಿ ಮಾಜಿ ಸಿಎಂ HDKಗೆ ದಂಡ ವಿಧಿಸಿದ್ದ ಬೆಸ್ಕಾಂ ಅಧಿಕಾರಿಗಳ ಮನೆ ಮೇಲೆ...

ಕರೆಂಟ್ ಕಳ್ಳತನ ಆರೋಪದಲ್ಲಿ ಮಾಜಿ ಸಿಎಂ HDKಗೆ ದಂಡ ವಿಧಿಸಿದ್ದ ಬೆಸ್ಕಾಂ ಅಧಿಕಾರಿಗಳ ಮನೆ ಮೇಲೆ ಲೊಕಾಯುಕ್ತ ದಾಳಿ

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 63 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಅವರಲ್ಲಿ ಇತ್ತೀಚೆಗೆ ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿಯವರಿಗೆ ದಂಡ ವಿಧಿಸಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೀಪಾವಳಿ ವಿದ್ಯುತ್ ದೀಪಾಲಂಕಾರಕ್ಕಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮೂಲಕ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆದ ಪ್ರಕರಣದಲ್ಲಿ ಬೆಸ್ಕಾಂ ಅಧಿಕಾರಿಗಳು ಮಾಜಿ ಸಿಎಂ ಮನೆಯಲ್ಲಿ ಪರಿಶೀಲಿಸಿ ದಂಡ ವಿಧಿಸಿದ್ದರು.

ಬೆಸ್ಕಾಂ ಜಾಗೃತ ದಳದ ಹಿರಿಯ ಅಧಿಕಾರಿ ಟಿ.ಎನ್.ಸುಧಾಕರ್ ರೆಡ್ಡಿ, ಬೆಸ್ಕಾಂ ಇಇ ಚನ್ನಕೇಶವ ಅವರು ವಿದ್ಯುತ್ ಕಳ್ಳತನ ಆರೋಪದಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆಗೆ ದಂಡ ವಿಧಿಸಿದ್ದರು. ಇದೀಗ ಟಿ.ಎನ್ ಸುಧಾಕರ್, ಚನ್ನಕೇಶವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular