HomeKarnatakaದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1: ಹೊಸ ವಿದ್ಯಾರ್ಥಿಗಳ ನೋಂದಣಿ ಮಾಹಿತಿ ಅಪ್ಲೋಡ್ ಮಾಡಲು...

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1: ಹೊಸ ವಿದ್ಯಾರ್ಥಿಗಳ ನೋಂದಣಿ ಮಾಹಿತಿ ಅಪ್ಲೋಡ್ ಮಾಡಲು ಕೊನೆಯ ದಿನಾಂಕ ವಿಸ್ತರಣೆ

ಬೆಂಗಳೂರು : ಮಾರ್ಚ್ 2024ರಲ್ಲಿ ನಡೆಯುವ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ಹೊಸ (Regular) ವಿದ್ಯಾರ್ಥಿಗಳ ನೋಂದಣಿ ಮಾಹಿತಿಗಳನ್ನು ಅಪ್ಲೋಡ್ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿದೆ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ 2024 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಕ್ಕೆ ಹೊಸ (REGULAR) ವಿದ್ಯಾರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಲಿಯ ಜಾಲತಾಣದ (https://kseab.karnataka.gov.in) PU EXAM PORTAL -03 ರಲ್ಲಿ ದಿನಾಂಕ:01-12-2023 ರವರೆಗೆ ಅವಕಾಶ ನೀಡಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳ ಪ್ರಾಂಶುಪಾಲರುಗಳ ಕೋರಿಕೆ ಮೇರೆಗೆ ಸದರಿ ದಿನಾಂಕವನ್ನು ದಿನಾಂಕ 20-12-2023 ರವರೆಗೆ ವಿಸ್ತರಿಸಲಾಗಿದೆ. ಈ ದಿನಾಂಕವು ಅಂತಿಮವಾಗಿದ್ದು, ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಲಾಗುವುದಿಲ್ಲ. ಆದ್ದರಿಂದ ನಿಗದಿತ ದಿನಾಂಕದೊಳಗೆ ಅಪ್ಲೋಡ್ ಮಾಡುವ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸಲು ತಿಳಿಸಿದೆ. ಯಾವುದಾದರೂ ವಿದ್ಯಾರ್ಥಿಗಳ ನೋಂದಣಿ ಮಾಹಿತಿಯನ್ನು ಅಪ್ಲೋಡ್ ಮಾಡದೇ ಇದ್ದಲ್ಲಿ ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರೇ ನೇರ ಜವಾಬ್ದಾರರಾಗುತ್ತಾರೆ. ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ನೋಂದಣಿ ವಿಷಯಕ್ಕೆ ಸಂಬಂಧಿಸಿದಂತೆ ಮಂಡಲಿಗೆ ಕಳುಹಿಸದಿರಲು ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular