
ಡಿ.08 ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 02ರವರೆಗೆ ಕಂಪ್ಲಿ ತಹಶೀಲ್ದಾರರ ಕಚೇರಿಯ ಸಭಾಂಗಣ ಮತ್ತು ಡಿ.13ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 02ರವರೆಗೆ ಬಳ್ಳಾರಿ ತಹಶೀಲ್ದಾರರ ಕಚೇರಿಯ ಸಭಾಂಗಣದಲ್ಲಿ ಲೋಕಾಯುಕ್ತರ ಜನ ಸಂಪರ್ಕ ಸಭೆ ನಡೆಯಲಿದೆ.
ಕುಂದು ಕೊರತೆಗಳಿರುವ ಸಾರ್ವಜನಿಕರು ನಿಗದಿತ ದಿನ ಮತ್ತು ಸ್ಥಳದಲ್ಲಿ ತಮ್ಮ ದೂರು ಅರ್ಜಿಗಳನ್ನು ನೀಡಬಹುದು. ಅಹವಾಲುಗಳಿರುವ ಅರ್ಜಿಗಳನ್ನು ಸ್ವೀಕರಿಸಿ ವಿಚಾರಿಸಲಾಗುತ್ತದೆ. ಕರ್ನಾಟಕ ಲೋಕಾಯುಕ್ತ ಬೆಂಗಳೂರು ವಿಭಾಗ ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಲು ನಮೂನೆ/ಫಾರಂ ನಂ:01 ಮತ್ತು 02 ಗಳನ್ನು ಸಹ ನೀಡಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

