alex Certify ಮತ್ತೆ ಮತ್ತೆ ಬಿಸಿ ಮಾಡಿದರೆ ವಿಷಕಾರಿಯಾಗಬಹುದು ಈ ತಿನಿಸುಗಳು; ಇರಲಿ ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಮತ್ತೆ ಬಿಸಿ ಮಾಡಿದರೆ ವಿಷಕಾರಿಯಾಗಬಹುದು ಈ ತಿನಿಸುಗಳು; ಇರಲಿ ಎಚ್ಚರ….!

ಸಾಮಾನ್ಯವಾಗಿ ಎಲ್ಲರೂ ಉಳಿದ ತಿಂಡಿ-ತಿನಿಸುಗಳನ್ನು ಮತ್ತೆ ಬಿಸಿ ಮಾಡಿ ಸೇವಿಸುತ್ತಾರೆ. ಆಹಾರ ವ್ಯರ್ಥವಾಗದಂತೆ ತಡೆಯಲು ಇದು ಸೂಕ್ತ. ಆದರೆ ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ.

ಆಲೂಗಡ್ಡೆ – ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಎಂಬ ಬ್ಯಾಕ್ಟೀರಿಯಾ ಆಲೂಗಡ್ಡೆಯಲ್ಲಿ ಬೆಳೆಯಬಹುದು. ಇದು ಆಹಾರವನ್ನು ವಿಷಮಯ ಮಾಡಿಬಿಡುತ್ತದೆ. ಮತ್ತೆ ಮತ್ತೆ ಬಿಸಿ ಮಾಡಿದಾಗ ಆಲೂಗಡ್ಡೆಯಲ್ಲಿ ಈ ಪರಿವರ್ತನೆಯಾಗುತ್ತದೆ. ಅಷ್ಟೇ ಅಲ್ಲ ಪದೇ ಪದೇ ಬಿಸಿ ಮಾಡುವುದರಿಂದ ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ.

ಸೊಪ್ಪು – ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್ ಇರುತ್ತದೆ. ಹಾಗಾಗಿ ಇದನ್ನು ಎರಡು ಮೂರು ಬಾರಿ ಬಿಸಿ ಮಾಡಿದಾಗ ಅದು ಅಪಾಯಕಾರಿಯಾಗಿ ಪರಿವರ್ತನೆಯಾಗುತ್ತದೆ. ಇದು ಕ್ಯಾನ್ಸರ್‌ಗೆ ಕೂಡ ಕಾರಣವಾಗಬಹುದು.

ಅನ್ನ – ಅನ್ನವನ್ನು ಕೂಡ ಎರಡನೇ ಬಾರಿಗೆ ಬಿಸಿ ಮಾಡಿಕೊಂಡು ತಿನ್ನಬಾರದು. ಅಕ್ಕಿಯಲ್ಲಿರುವ ಪಿಷ್ಟವನ್ನು ಮತ್ತೆ ಬಿಸಿ ಮಾಡಿದಾಗ ಅದು ಗ್ಲುಟನ್ ಆಗಿ ಪರಿವರ್ತನೆಯಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಮಾಂಸ – ಮಾಂಸವು ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಪುನಃ ಕಾಯಿಸಿದಾಗ ಪ್ರೋಟೀನ್‌ಗಳು ಮತ್ತು ಕೊಬ್ಬುಗಳು ಒಡೆಯುತ್ತವೆ. ಇವು ವಿಷಕಾರಿ ಪದಾರ್ಥಗಳಾಗಿ ಬದಲಾಗುತ್ತವೆ. ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅಣಬೆ – ಅಣಬೆಯಲ್ಲಿ ಪ್ರೋಟೀನ್ ಮತ್ತು ಖನಿಜಾಂಶಗಳು ಅಧಿಕವಾಗಿವೆ. ಪುನಃ ಕಾಯಿಸಿದಾಗ ಈ ಪ್ರೋಟೀನ್ ವಿಭಜನೆಯಾಗುತ್ತದೆ ಮತ್ತು ವಿಷಕಾರಿ ಪದಾರ್ಥಗಳಾಗಿ ಬದಲಾಗುತ್ತದೆ. ಇದು ಕೂಡ ಜೀರ್ಣಕ್ರಿಯೆಗೆ ಅಪಾಯಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...