alex Certify ಗಂಟಲಲ್ಲಿ ಚಕ್ಕುಲಿ ಸಿಲುಕಿ ಮಗು ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಟಲಲ್ಲಿ ಚಕ್ಕುಲಿ ಸಿಲುಕಿ ಮಗು ದುರ್ಮರಣ

ತಿರುವನಂತಪುರ: ಒಂದುವರೆ ವರ್ಷದ ಮಗು ಗಂಟಲಲ್ಲಿ ಚಕ್ಕುಲಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

ವೈಷ್ಣವ್ ಮೃತ ಮಗು. ವಿಜೇಶ್ ಹಾಗೂ ದಿವ್ಯಾ ದಾಸ್ ಎಂಬುವವರ ಅವಳಿ ಮಕ್ಕಳಲ್ಲಿ ವೈಷ್ಣವ್ ಕೂಡ ಒಬ್ಬ. ಬಾಲಕ ಚಕ್ಕುಲಿ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ಇದ್ದ. ಈ ವೇಳೆ ಏಕಾಏಕಿ ಚಕ್ಕುಲಿ ಗಂಟಲಲ್ಲಿ ಸಿಲುಕಿದೆ. ಉಸಿರಾಡಲು ಸಾಧ್ಯವಾಗದೇ ಮಗು ಕಷ್ಟಪಡುತ್ತಿತ್ತು.

ಇದನ್ನು ಗಮನಿಸಿದ ಪೋಷಕರು ತಕ್ಷಣ ಮಗುವನ್ನು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಮಗು ಉಸಿರು ಚೆಲ್ಲಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...