ಮಧುಮೇಹ ಸಂಪೂರ್ಣ ಗುಣಮುಖವಾಗದ ಕಾಯಿಲೆ. ಜೀವನಶೈಲಿಗೆ ಸಂಬಂಧಪಟ್ಟ ಸಮಸ್ಯೆ ಇದು. ಒಮ್ಮೆ ಸಕ್ಕರೆ ಕಾಯಿಲೆ ಬಂದರೆ ಅದು ನಮ್ಮನ್ನು ಜೀವನಪರ್ಯಂತ ಕಾಡುತ್ತದೆ. ವಿಜ್ಞಾನಿಗಳಿಂದ ಈವರೆಗೂ ಮಧುಮೇಹಕ್ಕೆ ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ಸಕ್ಕರೆ ಕಾಯಿಲೆ ಬರದಂತೆ ಎಚ್ಚರ ವಹಿಸುವುದು ಉತ್ತಮ.
ಸಾಮಾನ್ಯವಾಗಿ ತಪ್ಪು ಆಹಾರ ಪದ್ಧತಿ ಮತ್ತು ಜೀವನಶೈಲಿಯ ಅಸ್ವಸ್ಥತೆಗಳಿಂದ ಸಕ್ಕರೆ ಕಾಯಿಲೆ ಉಂಟಾಗುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಮೆಗ್ನೀಸಿಯಮ್ ಕೊರತೆಯಿಂದ ಮಧುಮೇಹದ ಅಪಾಯವು ಹೆಚ್ಚಾಗುತ್ತದೆ.
ದೇಹವನ್ನು ಆರೋಗ್ಯಕರವಾಗಿಡಲು ಇತರ ಪೋಷಕಾಂಶಗಳ ಜೊತೆಗೆ ಮೆಗ್ನೀಶಿಯಮ್ ಕೂಡ ಬೇಕಾಗುತ್ತದೆ. ಆದ್ದರಿಂದ ದೇಹದಲ್ಲಿ ಅದರ ಕೊರತೆ ಇರಬಾರದು.
ಮೆಗ್ನೀಶಿಯಮ್ ಏಕೆ ಮುಖ್ಯ ?
ಮೆಗ್ನೀಶಿಯಮ್ ಒಂದು ಪ್ರಮುಖ ಖನಿಜವಾಗಿದೆ. ಇದು ನಮ್ಮ ದೇಹದೊಳಗಿನ ಅನೇಕ ರೀತಿಯ ರಾಸಾಯನಿಕ ಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯಕ್ಕೂ ಇದು ಅಷ್ಟೇ ಮುಖ್ಯ.
ಮಧುಮೇಹದ ಅಪಾಯ
ಮೆಗ್ನೀಶಿಯಮ್ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಮೆಗ್ನೀಶಿಯಂ ಕೊರತೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ ಮೆಗ್ನೀಸಿಯಂ ಕೊರತೆಯಿಂದ ಹೃದ್ರೋಗ, ದೌರ್ಬಲ್ಯ, ಆಯಾಸ, ಸ್ನಾಯು ಸೆಳೆತದಂತಹ ಸಮಸ್ಯೆಗಳು ಬರಬಹುದು. ಉದ್ವೇಗ ಮತ್ತು ದೌರ್ಬಲ್ಯ ಕೂಡ ಕಾಡಬಹುದು.
ಕೆಲವೊಂದು ನಿರ್ದಿಷ್ಟ ಆಹಾರಗಳ ಸೇವನೆಯಿಂದ ಮೆಗ್ನೀಶಿಯಂ ಕೊರತೆಯನ್ನು ನಿವಾರಣೆ ಮಾಡಬಹುದು. ಅವುಗಳಲ್ಲಿ ಪ್ರಮುಖವಾದವೆಂದರೆ,
– ಡಾರ್ಕ್ ಚಾಕೊಲೇಟ್
– ಸೀಡ್ಸ್
– ಬಾಳೆಹಣ್ಣು
– ನಟ್ಸ್
– ಸೊಪ್ಪು-ತರಕಾರಿ
-ಸೋಯಾಬೀನ್
– ಆವಕಾಡೊ
-ಮೊಸರು
– ಫ್ಯಾಟಿ ಫಿಶ್
-ಸ್ಟ್ರಾಬೆರಿ
-ಅಂಜೂರ
– ದ್ವಿದಳ ಧಾನ್ಯ