HomeIndiaBIG NEWS: 'ಉದ್ಯೋಗ ಮೇಳ' ಮುಖಾಂತರ ಕೇಂದ್ರ ಸರ್ಕಾರದಿಂದ ನೇಮಕಾತಿ; ಪ್ರಧಾನಿ ಮೋದಿಯವರಿಂದ ಇಂದು ನೇಮಕಾತಿ...

BIG NEWS: ‘ಉದ್ಯೋಗ ಮೇಳ’ ಮುಖಾಂತರ ಕೇಂದ್ರ ಸರ್ಕಾರದಿಂದ ನೇಮಕಾತಿ; ಪ್ರಧಾನಿ ಮೋದಿಯವರಿಂದ ಇಂದು ನೇಮಕಾತಿ ಪತ್ರ ವಿತರಣೆ

ಉದ್ಯೋಗ ಮೇಳ ಮುಖಾಂತರ ಕೇಂದ್ರ ಸರ್ಕಾರ ಈಗಾಗಲೇ 10 ಲಕ್ಷ ನೇಮಕಾತಿಗಳನ್ನು ಮಾಡಿಕೊಂಡಿದ್ದು, ಇಂದು ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡಿರುವ 51,000ಕ್ಕೂ ಅಧಿಕ ಮಂದಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಪತ್ರ ವಿತರಿಸಲಿದ್ದಾರೆ.

ಇಂದು ಸಂಜೆ 4:00 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ನೇಮಕಾತಿ ಪತ್ರಗಳ ವಿತರಣೆ ನಡೆಯಲಿದ್ದು, ನರೇಂದ್ರ ಮೋದಿಯವರು ಹುದ್ದೆಗಳಿಗೆ ಆಯ್ಕೆಯಾದವರಿಗೆ ಸಾಂಕೇತಿಕವಾಗಿ ನೇಮಕಾತಿ ಪತ್ರ ನೀಡಲಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು ವಿಶೇಷ ಆನ್ಲೈನ್ ವ್ಯವಸ್ಥೆಯ ಮುಖಾಂತರ ಖಾಲಿ ಹುದ್ದೆಗಳ ಮತ್ತು ನೇಮಕಾತಿ ಪ್ರಕ್ರಿಯೆಗಳ ಕುರಿತು ಮೇಲ್ವಿಚಾರಣೆ ನಡೆಸುತ್ತಿದೆ. ಇಂದು ನಡೆಯಲಿರುವ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮ ದೂರದರ್ಶನ ಸುದ್ದಿ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular