
ಬೆಂಗಳೂರು ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಕಂಬಳದ ಕೋಣಗಳಿಗೆ ದಾರಿ ಮಧ್ಯೆ ಸ್ವಾಗತ ಕೋರಲಾಗಿದೆ.
ಹಾಸನಕ್ಕೆ ಬಂದಿಳಿದ 180 ಜೋಡಿ ಕಂಬಳದ ಕೋಣಗಳಿಗೆ ಸ್ವಾಗತ ಕೋರಲಾಗಿದೆ. ಹಾಸನದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ 4 ಗಂಟೆ ವಿಶ್ರಾಂತಿ ಪಡೆದಿದೆ. ಕಂಬಳದ ಕೋಣಗಳನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಸಿಎಂ, ಡಿಸಿಎಂ ಸೇರಿ ಇತರೆ ಪಕ್ಷದ ಪ್ರಮುಖರು ಕಂಬಳಕ್ಕೆ ಬರಲಿದ್ದಾರೆ. ಕಂಬಳ ವೀಕ್ಷಿಸಲು ಯಾವುದೇ ಶುಲ್ಕ ಇಲ್ಲ.

