![](https://kannadadunia.com/wp-content/uploads/2023/08/h-k-patil.png)
ವಿಜಯಪುರ: ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನಸ್ನೇಹಿ ಪ್ರವಾಸಿ ನೀತಿ ಜಾರಿಗೊಳಿಸುವುದಾಗಿ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ‘ನಮ್ಮ ಸ್ಮಾರಕ ದರ್ಶನ ಹಾಗೂ ಅವುಗಳ ಸಂರಕ್ಷಣೆ’ ಘೋಷ ವಾಕ್ಯದಡಿ ಪ್ರವಾಸ ಕೈಗೊಳ್ಳಲಾಗಿದೆ. ಇತಿಹಾಸ ತಜ್ಞರು, ಸಂಶೋಧಕರು, ಪ್ರವಾಸಿಗರು ಸೇರಿದಂತೆ ವಿವಿಧ ವಲಯದ ಜನರ ಅಭಿಪ್ರಾಯ ಪಡೆದುಕೊಂಡು ನೂತನ ಪ್ರವಾಸಿ ನೀತಿ ರೂಪಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ನೀತಿ ಸಿದ್ದಪಡಿಸಲಾಗುತ್ತಿದೆ. ಅಲ್ಪಸ್ವಲ್ಪ ಮಾರ್ಪಡಿಸಿ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬಡವರು, ಮಧ್ಯಮ ವರ್ಗದವರು ಕಡಿಮೆ ದರದಲ್ಲಿ ಪ್ರವಾಸ ಕೈಗೊಳ್ಳುವ ರೀತಿ ಮತ್ತು ಶೈಕ್ಷಣಿಕ, ಕೃಷಿ ಪ್ರವಾಸದ ದೃಷ್ಟಿಯಿಂದಲೂ ನೂತನ ಪ್ರವಾಸ ನೀತಿ ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.