![](https://kannadadunia.com/wp-content/uploads/2022/12/k-jayaprakash-hegde.png)
ಬೆಂಗಳೂರು: ಜಾತಿಗಣತಿ ವರದಿ ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿಕೊಂಡಂತಿದೆ. ವರದಿಯ ಮೂಲ ಪ್ರತಿಯೇ ಈಗ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಜಾತಿಗಣತಿಗೆ ಸಂಬಂಧಿಸಿದ ಮೂಲ ವರದಿಯೇ ಈಗ ಕಾಣೆಯಾಗಿದೆ ಎನ್ನಲಾಗುತ್ತಿದೆ. ಸೀಲ್ಡ್ ಬಾಕ್ಸ್ ನಲ್ಲಿದ್ದ ಜಾತಿಗಣತಿ ಮೂಲ ಪ್ರತಿ ಅಲಭ್ಯವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಲಾಗಿದೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದು, ಜಾತಿಗಣತಿ ವರದಿಯ ಮೂಲ ಪ್ರತಿ ಅಲಭ್ಯವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸೀಲ್ಡ್ ಬಾಕ್ಸ್ ನಲ್ಲಿದ್ದ ವರದಿ ಇದ್ದಕ್ಕಿದ್ದಂತೆ ಅಲಭ್ಯವಾಗಲು ಕಾರಣವೇನು? ಎಂಬುದೇ ಪ್ರಶ್ನೆ.