ಬೆಂಗಳೂರು: ಒಂದೂವರೆ ವರ್ಷದ ಹಿಂದೆ ಅತ್ತೆ ಮಗಳನ್ನು ಪ್ರೀತಿಸಿ ಆಕೆಯೊಂದಿಗೆ ಓಡಿ ಹೋದ ಅಳಿಯನೇ ಅತ್ತೆ ಮನೆಗೆ ಬಂದು ಚಿನ್ನಾಭರಣ ದೋಚಿದ್ದಾನೆ.
ಹಲಸೂರಿನ ಎಂವಿ ಗಾರ್ಡನ್ ನಿವಾಸಿ ಪ್ರದೀಪ್(23) ಬಂಧಿತ ಆರೋಪಿಯಾಗಿದ್ದು, 2.35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಹಲಸೂರು ಪೊಲೀಸ್ ಠಾಣೆ ನಿವಾಸಿ ರೆಹಿನಾ ಅವರ ಕಿರಿಯ ಪುತ್ರಿಯನ್ನು ಪ್ರೀತಿಸಿದ್ದ ಪ್ರದೀಪ್ ಆಖೆಯೊಂದಿಗೆ ಓಡಿ ಹೋಗಿದ್ದ. ರೆಜಿನಾ ಇತ್ತೀಚೆಗೆ ಕನ್ಯಾಕುಮಾರಿಗೆ ತೆರಳಿದ್ದಾಗ ಅಳಿಯ ಪ್ರದೀಪ್ ಅವರ ಮನೆಗೆ ಬಂದು ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಿದ್ದ. ಸ್ಥಳೀಯರು ಪ್ರಶ್ನಿಸಿದಾಗ ನಾನು ಅವರ ಸಂಬಂಧಿಕ ಎಂದು ತಿಳಿಸಿದ್ದ. ಅನುಮಾನಗೊಂಡ ರೆಜಿನಾ ನೆರಮನೆ ನಿವಾಸಿ ಆತನ ಫೋಟೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ರೆಜಿನಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಲು ಮುಂದಾದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ರೆಜಿನಾ ಕನ್ಯಾಕುಮಾರಿಯಿಂದ ಮನೆಗೆ ಬಂದ ನಂತರ ಬಾಗಿಲು ಮುರಿದಿರುವುದು ಚಿನ್ನಾಭರಣಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ. ನೆರೆ ಹೊರೆಯವರನ್ನು ವಿಚಾರಿಸಿದಾಗ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಪ್ರದೀಪ್ ಫೋಟೋ ತೋರಿಸಿದ್ದು, ತನ್ನ ಅಳಿಯ ಪ್ರದೀಪನ ಕೃತ್ಯ ಎಂದು ಗೊತ್ತಾಗಿದೆ. ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.