HomeLatest Newsವಿಶ್ವಕಪ್ ಫೈನಲ್: ಭಾರಿ ಸಂಕಷ್ಟದಲ್ಲಿ ಭಾರತ ತಂಡ: ಆಸೀಸ್ ಮೇಲುಗೈ

ವಿಶ್ವಕಪ್ ಫೈನಲ್: ಭಾರಿ ಸಂಕಷ್ಟದಲ್ಲಿ ಭಾರತ ತಂಡ: ಆಸೀಸ್ ಮೇಲುಗೈ

ಅಹಮದಾಬಾದ್ ನ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ 47, ಶುಭಮನ್ ಗಿಲ್ 4, ವಿರಾಟ್ ಕೊಹ್ಲಿ 54, ಶ್ರೇಯಸ್ ಅಯ್ಯರ್ 4, ಕೆ.ಎಲ್. ರಾಹುಲ್ 66, ರವೀಂದ್ರ ಜಡೇಜ 9, ಸೂರ್ಯ ಕುಮಾರ ಯಾದವ್ 14, ಮೊಹಮ್ಮದ್ ಶಮಿ 6, ಜಸ್ ಪ್ರೀತ್ ಬೂಮ್ರಾ 1, ಕುಲದೀಪ್ ಯಾದವ್ 2 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2 ವಿಕೆಟ್, ಜೋಶ್ ಹೇಜಲ್ ವುಡ್, ಗ್ಲೆನ್ ಮ್ಯಾಕ್ಸ್ ವೆಲ್, ಆಡಂ ಜಂಪ ತಲಾ 1 ವಿಕೆಟ್ ಪಡೆದರು.

30 ರನ್ ಗಳಿಸುವಷ್ಟರಲ್ಲಿ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡ ಭಾರತ 10.2 ಓವರ್ ಗಳಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿದ್ದು, 41.5 ಒವರ್ ಗಳಲ್ಲಿ 214 ರನ್ ಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular