ಕ್ರೀಡಾಪಟುಗಳು ಫಿಟ್ ಆಗಿರುವುದು ಬಹಳ ಮುಖ್ಯ. ಅದರಲ್ಲೂ ಕ್ರಿಕೆಟಿಗರು ತಮ್ಮ ಫಿಟ್ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಸಂಪೂರ್ಣ ಫಿಟ್ ಆಗಿದ್ದರೂ ಕ್ರಿಕೆಟರ್‌ಗಳು ಪಂದ್ಯದ ವೇಳೆ ಕ್ರ್ಯಾಂಪ್‌ಗಳನ್ನು ಎದುರಿಸಬೇಕಾಗುತ್ತದೆ. ಇಷ್ಟು ಫಿಟ್ ಆಗಿದ್ದರೂ ಕ್ರಿಕೆಟಿಗರಿಗೆ ಸೆಳೆತದ ಸಮಸ್ಯೆ ಏಕೆ ಎಂಬ ಪ್ರಶ್ನೆ ಸಹಜ.
ಈ ಬಾರಿಯ ವಿಶ್ವಕಪ್‌ನಲ್ಲಿ ಕೂಡ ವಿರಾಟ್ ಕೊಹ್ಲಿ, ಶುಭಮನ್‌ಗಿಲ್, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹೀಗೆ ಅನೇಕ ಕ್ರಿಕೆಟಿಗರು ತೊಡೆಯ ಸ್ನಾಯುಗಳು ಮತ್ತು ಕಾಲ್ಬೆರಳುಗಳಲ್ಲಿ ಕ್ರ್ಯಾಂಪ್‌ಗೆ ತುತ್ತಾಗಿದ್ದಾರೆ.
ಕ್ರ್ಯಾಂಪ್ ಉಂಟಾದಾಗ ಸ್ನಾಯು ಸೆಳೆತದ ಜೊತೆಗೆ ತೀವ್ರವಾದ ನೋವು ಇರುತ್ತದೆ. ಈ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ ಕೆಲವೊಮ್ಮೆ ಸಹಿಸಲು ಕಷ್ಟವಾಗುತ್ತದೆ. ಸೆಳೆತವು ಅನೇಕ ಕಾರಣಗಳಿಂದ ಉಂಟಾಗಬಹುದು. ನಿರ್ಜಲೀಕರಣ, ಅತಿಯಾದ ಆಯಾಸ ಕೂಡ ಇದಕ್ಕೆ ಕಾರಣವಾಗುತ್ತದೆ. ಪ್ರಖರ ಸೂರ್ಯನ ಬೆಳಕಿನಲ್ಲಿ ದೀರ್ಘಕಾಲ ಆಡಬೇಕಾದ ಆಟ ಕ್ರಿಕೆಟ್. ಹಾಗಾಗಿ ಕ್ರಿಕೆಟಿಗರು ಎಷ್ಟೇ ಫಿಟ್ ಆಗಿದ್ದರೂ ಕ್ರ್ಯಾಂಪ್‌ಗೆ ತುತ್ತಾಗುತ್ತಾರೆ.
ಪ್ರಖರ ಬಿಸಿಲಿನಲ್ಲಿ ಆಡುವುದರಿಂದ ಕ್ರಿಕೆಟಿಗರು ಡಿಹೈಡ್ರೇಶನ್ ಸಮಸ್ಯೆಯನ್ನು ಎದುರಿಸುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ಗಂಟೆಗಟ್ಟಲೆ ಬೆವರುವುದರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ. ನೀರಿನ ಕೊರತೆಯನ್ನು ಸರಿದೂಗಿಸಲು, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಎಲೆಕ್ಟ್ರೋಲೈಟ್‌ಗಳನ್ನು ಕುಡಿಯಬೇಕು.
ಅತಿಯಾದ ಆಯಾಸದಿಂದಾಗಿ ಸ್ನಾಯು ಸೆಳೆತ ಉಂಟಾಗಬಹುದು. ಅತಿಯಾದ ಸುಸ್ತು ಕೂಡ ದೇಹದಲ್ಲಿ ನೀರಿನ ಕೊರತೆ ಉಂಟುಮಾಡುತ್ತದೆ. ಸೆಳೆತವನ್ನು ತಪ್ಪಿಸಲು ಆಟಗಾರರು ಪಂದ್ಯದ ಆರಂಭದ ಮೊದಲು ಮತ್ತು ನಂತರ ದೇಹವನ್ನು ಹೈಡ್ರೀಕರಿಸಬೇಕು. ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ಪಾನೀಯಗಳನ್ನು ಕುಡಿಯಬೇಕು.