HomeKarnatakaBIG NEWS: ಪತ್ನಿಯನ್ನು ನೇಣು ಬಿಗಿದು ಕೊಲೆಗೈದು ಎಸ್ಕೇಪ್ ಆದ ಪತಿ ಅರೆಸ್ಟ್

BIG NEWS: ಪತ್ನಿಯನ್ನು ನೇಣು ಬಿಗಿದು ಕೊಲೆಗೈದು ಎಸ್ಕೇಪ್ ಆದ ಪತಿ ಅರೆಸ್ಟ್

ರಾಯಚೂರು: ಪತಿ ಮಹಾಶಯನೊಬ್ಬ ಪತ್ನಿಯನ್ನು ಹೊಡೆದು, ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆ ನೇಣುಬಿಗಿದು ಸಾಯಿಸಿ ಎಸ್ಕೇಪ್ ಆಗಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಪಟೇಲವಾಡಿಯಲ್ಲಿ ನಡೆದಿದೆ.

31 ವರ್ಷದ ಭುವನೇಶ್ವರಿ ಕೊಲೆಯಾದ ಮಹಿಳೆ. ಭುವನೇಶ್ವರಿ ಹಾಗೂ ನಾಗರಾಜ್ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ ನಾಗರಾಜ್ ಇತ್ತೀಚೆಗೆ ಕುಡಿದು ಬಂದು ಪತ್ನಿಗೆ ಹಿಂಸಿಸುತ್ತಿದ್ದ. ಅನಗತ್ಯವಾಗಿ ಜಗಳವಾಡುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಾರಿ ಪತಿ-ಪತ್ನಿ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದ್ದು, ನಾಗರಾಜ್ ಪತ್ನಿಗೆ ಹೊಡೆದಿದ್ದಾನೆ. ಪತ್ನಿ ಭುವನೇಶ್ವರಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪತ್ನಿ ಪ್ರಜ್ಞೆ ತಪ್ಪಿರುವುದು ಗೊತ್ತಾಗುತ್ತಿದ್ದಂತೆ ನಾಗರಾಜ್ ಆಕೆಯ ಕೊರಳಿಗೆ ನೇಣು ಬಿಗಿದು ಸಾಯಿಸಿದ್ದಾನೆ. ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ.

ಭುವನೇಶ್ವರಿ ಪೋಷಕರು ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಆರೋಪಿ ನಾಗರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular