ಚೆನ್ನೈ: ಶ್ರೀಲಂಕಾ ನೌಕಾಪಡೆಯಿಂದ ಬಂಧಿಸಲ್ಪಟ್ಟ 22 ಮೀನುಗಾರರನ್ನು ಇಂದು ಬಿಡುಗಡೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸೂಚನೆ ಮೇರೆಗೆ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಮೀನುಗಾರರು ದಿನದ ನಂತರ ಚೆನ್ನೈ ತಲುಪುವ ನಿರೀಕ್ಷೆಯಿದೆ.
ಇಂದು ಮುಂಜಾನೆ ರಾಮೇಶ್ವರಂನಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಮೀನುಗಾರರ ಸಮಸ್ಯೆಗಳ ಕುರಿತು ವಿವರಿಸಿ ಮನವಿ ಸಲ್ಲಿಸಲಾಯಿತು. ಶ್ರೀಲಂಕಾ ನೌಕಾಪಡೆ 133 ದೋಣಿಗಳ ವಶಪಡಿಸಿಕೊಂಡಿದೆ. ಇದರಿಂದ ಮೀನುಗಾರರಿಗೆ ಸಮಸ್ಯೆ ಎದುರಾಗಿದ್ದು, ಬಗೆಹರಿಸುವ ಕುರಿತು ಮೀನುಗಾರರು ಮನವಿ ಪತ್ರ ನೀಡಿದರು.
ಶ್ರೀಲಂಕಾ ವಶದಲ್ಲಿರುವ ತಮ್ಮ 133 ದೋಣಿಗಳ ಬಿಡಿಸಿಕೊಡಬೇಕು. ಮೀನುಗಾರರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ನಿರ್ಮಲಾ ಸೀತಾರಾಮನ್ ಅವರು ಶ್ರೀಲಂಕಾದಲ್ಲಿರುವ ಡೆಪ್ಯುಟಿ ಹೈಕಮಿಷನರ್‌ಗೆ ಕರೆ ಮಾಡಿ ತುರ್ತಾಗಿ ಕ್ರಮಕ್ಕೆ ಕೇಳಿಕೊಂಡರು. ಅವರು 22 ಮೀನುಗಾರರ ಬಿಡುಗಡೆಗಾಗಿ ಶ್ರೀಲಂಕಾದ ಅಧಿಕಾರಿಗಳೊಂದಿಗೆ ಮಾತನಾಡಿದರು. ಶ್ರೀಲಂಕಾ ನೌಕಾಪಡೆ ಮೀನುಗಾರರ ಬಿಡುಗಡೆ ಮಾಡಿದೆ.