alex Certify ರಾಜ್ಯಾದ್ಯಂತ ಕೃಷಿ, ಅರಣ್ಯ ಭೂಮಿಯನ್ನು `ಡ್ರೋನ್’ ಮೂಲಕ ಮರು ಸರ್ವೇ : ಸಚಿವ ಕೃಷ್ಣ ಬೈರೇಗೌಡ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಾದ್ಯಂತ ಕೃಷಿ, ಅರಣ್ಯ ಭೂಮಿಯನ್ನು `ಡ್ರೋನ್’ ಮೂಲಕ ಮರು ಸರ್ವೇ : ಸಚಿವ ಕೃಷ್ಣ ಬೈರೇಗೌಡ ಘೋಷಣೆ

ರಾಮನಗರ :  ರಾಜ್ಯಾದ್ಯಂತ ಕೃಷಿ ಭೂಮಿ ಮತ್ತು ಅರಣ್ಯ ಭೂಮಿಗಳನ್ನು ಡ್ರೋನ್ ಮೂಲಕ ಸರ್ವೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕನಕಪುರ ತಾಲ್ಲೂಕು ಹುಕುಂದ ಗ್ರಾಮದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಮರು ಭೂ ಮಾಪನ ಕಾರ್ಯವನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 1920ರ ನಂತರ ಸರ್ವೇ ನಡೆದಿಲ್ಲ. ಪ್ರತಿ  ಹಳ್ಳಿಯ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರ್ಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳಿಗೆ ಸಂಬಂಧಿಸಿದಂತೆ ಈಗ ಸರ್ಕಾರದ ಬಳಿ ಇರುವುದು ನೂರು ವರ್ಷಗಳ ಹಳೆಯ ಬ್ರಿಟೀಷರ ಕಾಲದಲ್ಲಿ ನಡೆದ ಸರ್ವೇ ದಾಖಲೆಯೇ ಆಗಿದೆ. ಹೀಗಾಗಿ ಹೊಸದಾಗಿ ಸರ್ವೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಈ ನೂರು  ವರ್ಷದಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪ್ರತಿಯೊಂದು ಗ್ರಾಮಠಾಣಾ ಗಡಿ ಹಾಗೂ ಸರ್ವೇ ನಂಬರ್ ಗಡಿಯಲ್ಲೂ ವ್ಯತ್ಯಾಸಗಳಾಗಿವೆ. ಆದರೆ, ಈ ಬಗ್ಗೆ ಸರ್ಕಾರಿ ದಾಖಲೆಗಳಲ್ಲಿ ನಿಖರ ವಿವರಣೆ ಇಲ್ಲ.ಜಮೀನುಗಳ ಮರು ಸರ್ವೆಯಿಂದ ಅರಣ್ಯ ಭೂಮಿ ಸೇರಿದಂತೆ ಸರಕಾರಿ ಜಮೀನುಗಳ ಒತ್ತುವರಿ ಗುರುತಿಸಲು ಹಾಗೂ ಗೊಂದಲ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...