alex Certify BREAKING : ‘ತನಿಷಾ ಕುಪ್ಪಂಡ’ಗೆ ಸಂಕಷ್ಟ : ‘ಬಿಗ್ ಬಾಸ್’ ಆಡಳಿತ ಮಂಡಳಿಗೆ ಪೊಲೀಸ್ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ತನಿಷಾ ಕುಪ್ಪಂಡ’ಗೆ ಸಂಕಷ್ಟ : ‘ಬಿಗ್ ಬಾಸ್’ ಆಡಳಿತ ಮಂಡಳಿಗೆ ಪೊಲೀಸ್ ನೋಟಿಸ್

ಬೆಂಗಳೂರು : ಬೋವಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡಗೆ ಸಂಕಷ್ಟ ಎದುರಾಗಿದ್ದು, ಬಿಗ್ ಬಾಸ್ ಆಡಳಿತ ಮಂಡಳಿಗೆ ಪೊಲೀಸ್ ನೋಟಿಸ್ ನೀಡಲಾಗಿದೆ.

ಹೌದು, ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಪೊಲೀಸರು ಬಿಗ್ ಬಾಸ್ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದು, ಅಸಲಿ ಫೂಟೇಜ್ ಕೊಡಲು ಸೂಚನೆ ನೀಡಿದ್ದಾರೆ. ಪೋಟೇಜ್ ಪಡೆದುಕೊಂಡು ನಂತರ ಪೊಲೀಸರು ಎಫ್ ಎಸ್ ಎಲ್ ಗೆ ರವಾನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಸಿದ ಹಿನ್ನೆಲೆ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪುಂಡ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬೋವಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕುಂಬಳಗೋಡು ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ . ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ . ಪದ್ಮಾ ಈ ದೂರು ನೀಡಿದ್ದಾರೆ. SC, ST ದೌರ್ಜನ್ಯ ಕಾಯಿದೆಯಡಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕುವಂತೆ ಆಗ್ರಹಿಸಲಾಗಿದೆ. ಡ್ರೋನ್ ಪ್ರತಾಪ್ ಹಾಗೂ ತನಿಷಾ ನಡುವೆ ನಡೆದ ಸಂಭಾಷಣೆ ವೇಳೆ ‘ವಡ್ಡ’ ಎಂಬ ಪದ ಬಳಕೆ ಮಾಡಿದ್ದಾರೆ, ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಪದ್ಮಾ ಆಗ್ರಹಿಸಿದ್ದರು.ತನಿಷಾ ಕುಪ್ಪಂಡ ಕನ್ನಡ ಚಿತ್ರರಂಗದ ನಟಿ. ಮೂಲತಃ ಕೊಡಗಿನವರಾದ ಇವರು ಸದ್ಯ ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...