
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣಾದೇವಿ, ನಮ್ಮ ತಂದೆ ಯಡಿಯೂರಪ್ಪನವರು ಆ ಕಾಲದಲ್ಲೇ ಪಕ್ಷ ಸಂಘಟಕರಾಗಿ ಹೋರಾಟ ಮಾಡಿದ್ದರು. ಈಗ ಬಿ.ವೈ.ವಿಜಯೇಂದ್ರಗೆ ಪಕ್ಷದ ನಾಯಕರು ಜವಾಬ್ದಾರಿ ನೀಡಿರುವುದು ಸಂತೋಷ ತಂದಿದೆ ಎಂದರು.
ರಾಜ್ಯದ ಜನರು ವಿಜಯೇಂದ್ರ ಜೊತೆ ಇದ್ದಾರೆ. ವಿಜಯೇಂದ್ರ ಅಧಿಕರ ಸ್ವೀಕರಿಸುತ್ತಿರುವುದು ಕೇವಲ ಕುಟುಂಬಸ ಸಂಭ್ರಮವಲ್ಲ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಸಂಭ್ರಮ ಎಂದು ತಿಳಿಸಿದ್ದಾರೆ.

