 ಹಾಸನ : ಯಾವುದೇ ಜೆಡಿಎಸ್ ಶಾಸಕರು  ಕಾಂಗ್ರೆಸ್ ಗೆ  ಹೋಗುವುದಿಲ್ಲ ಎಂದು ಹಾಸನಾಂಬೆ ದರ್ಶನದ ಬಳಿಕ ಶಾಸಕ ಸುರೇಶ್  ಬಾಬು  ಹೇಳಿದ್ದಾರೆ.
ಹಾಸನ : ಯಾವುದೇ ಜೆಡಿಎಸ್ ಶಾಸಕರು  ಕಾಂಗ್ರೆಸ್ ಗೆ  ಹೋಗುವುದಿಲ್ಲ ಎಂದು ಹಾಸನಾಂಬೆ ದರ್ಶನದ ಬಳಿಕ ಶಾಸಕ ಸುರೇಶ್  ಬಾಬು  ಹೇಳಿದ್ದಾರೆ.
ಹಾಸನದ ಹಾಸನಾಂಬೆ ದೇವಿ ದರ್ಶನಕ್ಕೆ ಆಗಮಿಸಿದ ದೇವಿ ದರ್ಶನ ಪಡೆದು ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಜೆಡಿಎಸ್ ಎಲ್ಲಾ 19 ಶಾಸಕರು ಒಂದಾಗಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಮಾತ್ರ ಶರಣಗೌಡ ವಿರೋವಿದೆ. ಅದು ಬಿಟ್ಟರೆ ಪಕ್ಷದ ಬಗ್ಗೆ ಶರಣಗೌಡ ಕಂದಕೂರುಗೆ ಭಿನ್ನಾಭಿಪ್ರಾಯವಿಲ್ಲ. ಆ ತರಹ ಬೆಳವಣಿಗೆಗಳು ಆಗಲಾರದು. ಯಾವುದೇ ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಸರ್ಕಾರ ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದೆ. ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವ ಮೂಲಕ ಹಣ ವಸೂಲಿ ಮಾಡಲಾಗಿದೆ ಎಂದರು.

 
		 
		 
		 
		 Loading ...
 Loading ... 
		 
		 
		